ನೋಯ್ಡಾ;ನೋಯ್ಡಾದ ಡೇ ಕೇರ್ನಲ್ಲಿ ಒಂದು ವರ್ಷದ ಮಗುವಿಗೆ ಭೀಕರವಾದ ಹಿಂಸಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 4 ರಂದು ಈ ದುರಂತ ನಡೆದಿದೆ.ನೋಯ್ಡಾದ ಒಂದು ಡೇ ಕೇರ್ ಸೆಂಟರ್‌ನಲ್ಲಿ ಒಂದು ವರ್ಷದ ಮಗುವಿನ ಮೇಲೆ ಕಚ್ಚಿ ಹಲ್ಲೆ ಹಾಗೂ ಬಾರಿಸುವ ಘಟನೆ ನಡೆದಿದೆ. ಸಿಸಿಟಿವಿ ಫುಟೇಜ್‌ನಲ್ಲಿ ಮಗುವಿನ ಮೇಲೆ ಪ್ಲಾಸ್ಟಿಕ್ ಬ್ಯಾಟ್‌ನಿಂದ ಹಲ್ಲೆ ಮಾಡಲಾಗಿದ್ದು, ಮಗುವನ್ನು ನೆಲಕ್ಕೆ ಎಸೆದು ಥಳಿಸುವುದು ಕಂಡುಬಂದಿದೆ.

ಆಗಸ್ಟ್ 4 ರಂದು ನಡೆದ ಈ ಘಟನೆಯನ್ನು ಮಗುವಿನ ತಾಯಿ ಗಮನಿಸಿ, ಮಗು ಅಳುತ್ತಿದ್ದುದನ್ನು ಕಂಡು, ಬಟ್ಟೆ ಬದಲಾಯಿಸಿದಾಗ ಮಗುವಿನ ಎರಡು ತೊಡೆಯ ಮೇಲೆ ಕಚ್ಚಿದ ಗುರುತುಗಳನ್ನು ಕಂಡು ವೈದ್ಯರ ಬಳಿಗೆ ಕರೆದೊಯ್ದರು. ವೈದ್ಯರು ಗಾಯಗಳು ಕಚ್ಚಿದದ್ದೇ ಎಂಬುದನ್ನು ದೃಢಪಟ್ಟಿದ್ದಾರೆ. ಸಿಸಿಟಿವಿ ಫುಟೇಜ್ ಪರಿಶೀಲನೆಯಿಂದ ಈ ದುರ್ಘಟನೆ ದೃಢವಾಯಿತು.ಈ ಡೇ ಕೇರ್ ಸೆಂಟರ್‌ನ ಪರವಾನಗಿಗೆ ಸಂಬಂಧಿಸಿದಂತೆ ಕೂಡ ತನಿಖೆ ನಡೆಯುತ್ತಿದೆ.ಈ ಪ್ರಕರಣ ಸಂಬಂಧ ಡೇ ಕೇರ್ ಸೆಂಟರ್ಗೆ ಪರವಾನಗಿ ಇದ್ದದೆಯೇ ಎಂಬ ಅನುಮಾನಗಳು ಉದ್ಭವಿಸಿದ್ದು, ತನಿಖೆ ಪ್ರಾರಂಭವಾಗಿದೆ. ಈ ಘಟನೆಯು ಶಾಲಾ ಮಕ್ಕಳ ಸುರಕ್ಷತೆ, ಪಾಲಕರು ಎಚ್ಚರಿಕೆಯಿಂದಿರಬೇಕಾದ ಅಗತ್ಯವನ್ನು ಮತ್ತೊಮ್ಮೆ ತೋರಿಸುತ್ತದೆ.
ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಎಸ್‌ಐಟಿ ತನಿಖೆಗೆ ಹಿಂದೂ ಸಂಘಟನೆಗಳ ಒತ್ತಾಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


