ಚನ್ನರಾಯಪಟ್ಟಣ: ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಸದ್ಯ ಚಿನ್ನಯ್ಯನ ಬಂಧನದ ಬಳಿಕ ಹಲವು ಮಂದಿಯನ್ನು ಕರೆದು ವಿಚಾರಣೆ ಮಾಡುತ್ತಿದೆ.
ಯುಟ್ಯೂಬರ್‌ಗಳಾದ ಅಭಿಷೇಕ್, ಕೇರಳದ ಮನಾಫ್, ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಟಿ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸುಜಾತಾ ಭಟ್ ಅವರ ಮೊದಲ ಸಂದರ್ಶನ ಮಾಡಿದ್ದ ಯುನೈಟೆಡ್ ಮೀಡಿಯಾ ಯುಟ್ಯೂಬ್ ಚಾನೆಲ್‌ನ ಅಭಿಷೇಕ್ ಎಸ್‌ಐಟಿ ವಿಚಾರಣೆ ಅಂತ್ಯಗೊಳಿಸಿದ ಬಳಿಕ ತನ್ನ ವಿರುದ್ಧ ಅಪಪ್ರಚಾರ ಮಾಡಿದ್ದ ಮತ್ತೋರ್ವ ಯುಟ್ಯೂಬರ್ ಸುಮಂತ್ ವಿರುದ್ಧ ದೂರು ನೀಡಲು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅಭಿಷೇಕ್ ಎಸ್‌ಐಟಿ ತನಿಖೆಯ ಬಗ್ಗೆ ಸಹ ಮಾತನಾಡಿದರು. ದುಡ್ಡು ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಕುರಿತು ಮಾತನಾಡಿದ ಅಭಿಷೇಕ್ ಯುಟ್ಯೂಬ್‌ನಿಂದ ಬರುವ ಆದಾಯ ಹೊರತುಪಡಿಸಿ ಇನ್ಯಾವುದೇ ಒಂದು ವಹಿವಾಟನ್ನು ತನ್ನ ಖಾತೆಯಲ್ಲಿ ತೋರಿಸಲಿ ಎಂದು ಸವಾಲೆಸೆದರು.
ಅಲ್ಲದೇ ಜನರ ಏನು ಹೇಳಿದ್ದಾರೋ ಅದನ್ನು ನಾನು ಪ್ರಸಾರ ಮಾಡಿದ್ದೇನೆ, ನಾನ್ಯಾವುದೋ ಊಹಾಪೋಹಗಳನ್ನು ಹೇಳಿಲ್ಲ ಎಂದರು. ಇನ್ನು ಎಸ್‌ಐಟಿ ಅಧಿಕಾರಿಗಳಿಗೆ ತಾನು ವಿಡಿಯೊ ಮಾಡಲು ಬಳಸಿದ್ದ ಸಾಧನಗಳನ್ನು ಕೊಟ್ಟಿದ್ದು, ಅವುಗಳಲ್ಲಿ ವಿಡಿಯೊಗೆ ಸಂಬಂಧಿಸಿದ ಸಾಕ್ಷಿಗಳಿವೆ ಎಂದರು.
ಯುಟ್ಯೂಬರ್‌ಗಳು ಮಾಡಿದ ವಿಡಿಯೊದಿಂದ ಇಷ್ಟೆಲ್ಲ ನಡೆಯುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ಬರೀ ಯುಟ್ಯೂಬರ್‌ಗಳು ಹೇಳಿದ ಕಾರಣ ಎಸ್‌ಐಟಿ ರಚನೆಯಾಯ್ತಾ ಎಂದು ಪ್ರಶ್ನಿಸಿದರು. ಇನ್ನು ಇಂತಹ ಆರೋಪಗಳು ಯಾಕೆ ಬರುತ್ತಿವೆ ಎಂದರೆ 16 ಕಡೆ ಅಗೆದರೂ ಎಲ್ಲಿಯೂ ಏನೂ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ ಎಂದು ಮಾಧ್ಯಮದವರು ಅಭಿಷೇಕ್‌ಗೆ ಪ್ರಶ್ನೆ ಹಾಕಿದರು.
ಈ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಸಿಗಲಿಲ್ಲ ಅಂತ ಯಾರು ಹೇಳಿದ್ರು? ಸಿಕ್ಕಾಗ ಸಿಕ್ಕಿತು ಅಂತ ಯಾರಾದರೂ ಹೇಳಿದ್ದಾರಾ? ಸಿಗದಿದ್ದಾಗ ಸಿಗಲಿಲ್ಲ ಅಂತ ಯಾರಾದರೂ ಹೇಳಿದ್ದಾರಾ? ಇದುವರೆಗೂ ಎಸ್‌ಐಟಿಯಿಂದ ಅಧಿಕೃತವಾಗಿ ಒಂದು ಮಾಹಿತಿಯೂ ಬಂದಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಕಂಡುಬರುತ್ತಿದೆ, ಆದರೆ ಒಳಗಡೆ ಏನಾಗುತ್ತಿದೆ ಎಂದು ಯಾರಿಗಾದರೂ ಗೊತ್ತಾ ಎಂದು ಪ್ರಶ್ನಿಸಿ ಮತ್ತೊಮ್ಮೆ ಅಭೀಷೇಕ್ ನಗುತ್ತಲೇ ಕೌಂಟರ್ ಕೊಟ್ಟರು.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


