ದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಎರಡನೇ ದಿನದಾಟದಂತ್ಯಕ್ಕೆ ಭಾರತ 378 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಬ್‌ಮನ್ ಗಿಲ್ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 518 ರನ್ ಕಲೆಹಾಕಿ ಡಿಕ್ಲೇರ್ ಮಾಡಿದ್ದು, ವೆಸ್ಟ್ ಇಂಡೀಸ್ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿದೆ.
ಇನ್ನು ಭಾರತದ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 258 ಎಸೆತಗಳಲ್ಲಿ 22 ಬೌಂಡರಿ ಸಹಿತ 175 ರನ್ ಕಲೆಹಾಕಿದರು. ಉತ್ತಮವಾಗಿ ಆಡುತ್ತಿದ್ದ ಜೈಸ್ವಾಲ್ ದ್ವಿಶತಕ ಬಾರಿಸಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಜೈಸ್ವಾಲ್ ರನ್ ಕದಿಯಲು ಯತ್ನಿಸಿದ ವೇಳೆ ನಾನ್ ಸ್ಟ್ರೈಕರ್ ಎಂಡ್‌ನಲ್ಲಿದ್ದ ಗಿಲ್ ರನ್ ಓಡಲು ಯತ್ನಿಸದ ಕಾರಣ ಜೈಸ್ವಾಲ್ ರನ್‌ಔಟ್ ಆದರು.
ಹೀಗೆ ರನ್‌ಔಟ್ ಆಗಿ ದ್ವಿಶತಕ ಕೈತಪ್ಪಿಸಿಕೊಂಡ ಜೈಸ್ವಾಲ್ ಔಟ್ ಆಗುತ್ತಿದ್ದಂತೆ ಗಿಲ್ ವಿರುದ್ಧ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ನಾನು ಓಡಿಬಂದೆನಲ್ಲ ಓಡಬಹುದಿತ್ತು ಎಂದು ಕೈಸನ್ನೆ ಮಾಡುತ್ತಾ ತಲೆ ಚಚ್ಚಿಕೊಂಡು ಆಕ್ರೋಶ ಹೊರಹಾಕಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


