ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಶಸ್ತ್ರ ಚಿಕಿತ್ಸೆಯ ಸಲುವಾಗಿ ಅಮೆರಿಕಾಗೆ ತೆರಳುತ್ತಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಹರಿದಾಡುತ್ತಿತ್ತು.
ಇದೀಗ ಅಮೇರಿಕಾಗೆ ತೆರಳುವ ದಿನಾಂಕ ನಿಗದಿಯಾಗಿದ್ದು, ಶಸ್ತ್ರಚಿಕಿತ್ಸೆಗೂ ಡೇಟ್ ಫಿಕ್ಸ್ ಆಗಿದೆ.
ನಟ ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುತ್ತಿದ್ದು, ಸರ್ಜರಿಗೆ ಒಳಗಾಗಲಿದ್ದಾರೆ.
ಇದೇ ಡಿಸೆಂಬರ್.18ರಂದು ಶಿವರಾಜ್ ಕುಮಾರ್ ಅಮೇರಿಕಾಗೆ ತೆರಳುತ್ತಿದ್ದಾರೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್.24ರಂದು ಶಿವರಾಜ್ ಕುಮಾರ್‌ಗೆ ಸರ್ಜರಿ ನಡೆಯಲಿದೆ.
ಸರ್ಜರಿ ಆದ ಬಳಿಕವು ನಟ ಶಿವರಾಜ್ ಕುಮಾರ್ ಅವರು ಅಲ್ಲೇ ಕೆಲ ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಭೈರತಿ ರಣಗಲ್ ಚಿತ್ರದ ಪ್ರಚಾರಕ್ಕಾಗಿ ಪಾಲ್ಗೊಂಡ ಹಲವು ಸಂದರ್ಶನಗಳಲ್ಲಿ ಶಿವರಾಜ್‌ಕುಮಾರ್ ಅನಾರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಶಿವರಾಜ್‌ಕುಮಾರ್ ಅನಾರೋಗ್ಯ ಸಮಸ್ಯೆ ಇರುವುದು ನಿಜ. ಸದ್ಯ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೊಳಗಾಗಿದ್ದು, ಮುಂದಿನ ದಿನಗಳಲ್ಲಿ ವಿದೇಶಕ್ಕಾಗಿ ಹೆಚ್ಚುವರಿ ಚಿಕಿತ್ಸೆಗೆ ತೆರಳಬೇಕು ಎಂದು ತಿಳಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


