ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಇಂದು ( ಡಿಸೆಂಬರ್ 11 ) ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದಿದೆ. ರಾಜ್ಯದ ಬಹುತೇಕ ಎಲ್ಲ ನಗರಗಳು ಹಾಗೂ ಕೆಲ ಪ್ರಮುಖ ನಗರಗಳಲ್ಲಿ ಡೆವಿಲ್ ಬೆಳಗ್ಗೆ ಆರೂವರೆಯಿಂದಲೇ ಪ್ರದರ್ಶನ ಆರಂಭಿಸಿದೆ.
ಎರಡು ಗಂಟೆ 49 ನಿಮಿಷಗಳ ರನ್‌ಟೈಮ್ ಹೊಂದಿರುವ ಡೆವಿಲ್ ಚಿತ್ರ ಅಧಿಕಾರ, ಪ್ರತೀಕಾರ ಹಾಗೂ ನೈಜ ಪ್ರೀತಿಯ ಸಾಹಸಗಾಥೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಟೀಸರ್ ಹಾಗೂ ಟ್ರೈಲರ್‌ಗಳಿಂದ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಹಲವಾರು ಪ್ರಶ್ನೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿದ್ದ ಡೆವಿಲ್ ವೀಕ್ಷಿಸಲು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಬೆಳ್ಳಂಬೆಳಗಿನ ಪ್ರದರ್ಶನದ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದಾರೆ.
ಹೀಗಾಗಿ ಬೆಳಗ್ಗೆ 6.30ರಿಂದ 9 ಗಂಟೆವರೆಗಿನ ಅರ್ಲಿ ಮಾರ್ನಿಂಗ್ ಪ್ರದರ್ಶನಗಳು ( EMS ) ಬೆಂಗಳೂರಿನ ಬಹುತೇಕ ಎಲ್ಲ ಕಡೆ ಹೌಸ್‌ಫುಲ್ ಆಗಿದ್ದು, ಈ ಪ್ರದರ್ಶನಗಳ ಸಂಖ್ಯೆಯಲ್ಲಿ ಡೆವಿಲ್ ಈ ಹಿಂದೆ ಬಿಡುಗಡೆಯಾಗಿ ದಾಖಲೆ ಬರೆದಿದ್ದ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಹಾಗೂ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ಬೆಳಗ್ಗೆ 6.30ರಿಂದ 9 ಗಂಟೆವರೆಗೆ ಬೆಂಗಳೂರು ನಗರದಲ್ಲಿ ಡೆವಿಲ್ 160 ಪ್ರದರ್ಶನಗಳನ್ನು ಕಂಡಿದ್ದು, ಕಾಂತಾರ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಬಳಿಕ ನಗರದಲ್ಲಿ ಅತಿಹೆಚ್ಚು ಅರ್ಲಿ ಮಾರ್ನಿಂಗ್ ಪ್ರದರ್ಶನಗಳನ್ನು ( EMS ) ಪಡೆದುಕೊಂಡ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಬೆಳಗ್ಗೆ 6.30ರಿಂದ 9 ಗಂಟೆವರೆಗೆ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಕನ್ನಡ ಚಿತ್ರಗಳು
1. ಕಾಂತಾರ ಚಾಪ್ಟರ್ 1 – 232 ಪ್ರದರ್ಶನಗಳು
2. ಕೆಜಿಎಫ್ ಚಾಪ್ಟರ್ 2 -202 ಪ್ರದರ್ಶನಗಳು
3. ದೆ ಡೆವಿಲ್ – 160 ಪ್ರದರ್ಶನಗಳು
4. ಜೇಮ್ಸ್ – 145 ಪ್ರದರ್ಶನಗಳು
5. ಮ್ಯಾಕ್ಸ್ – 142 ಪ್ರದರ್ಶನಗಳು
ದೇವರು ಒಳ್ಳೆಯದು ಮಾಡಲಿ, ನಾಳೆ ಎಲ್ಲರೂ ದರ್ಶನ್ ಅವರ ಡೆವಿಲ್ ನೋಡಿ ಎಂದು ಕರೆಕೊಟ್ಟ ಶಿವಣ್ಣ; ವಿಡಿಯೊ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


