ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ (Silver Price) ವಿಪರೀತ ಏರಿಕೆ ಕಂಡಿದ್ದು, ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ! ಗುರುವಾರ, ಡಿಸೆಂಬರ್ 11ರಂದು ಬಿಳಿ ಲೋಹದ ದರ ಒಂದೇ ಸೆಷನ್‌ನಲ್ಲಿ ಬೃಹತ್ ಜಿಗಿತ ಕಂಡಿದೆ.
ಜಾಗತಿಕ ಮತ್ತು ಕೈಗಾರಿಕಾ ಬೇಡಿಕೆ ಹೆಚ್ಚಾದ ಕಾರಣ, ಭಾರತದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2 ಲಕ್ಷ ರೂಪಾಯಿಗಳ ಸಮೀಪಕ್ಕೆ ಬಂದು ನಿಂತಿದೆ! ನಿನ್ನೆ ₹199ಕ್ಕೆ ಏರಿದ್ದ ಬೆಳ್ಳಿ ಬೆಲೆ ಇಂದು ಮತ್ತೊಂದು ಹೆಜ್ಜೆ ಮುಂದೆ ಹೋಗಿ ₹201ಕ್ಕೆ ಮುಟ್ಟಿದೆ.
ಏಕೆ ಈ ಏರಿಕೆ? ಅಮೆರಿಕಾದಲ್ಲಿ ಬಡ್ಡಿ ದರ ಕಡಿತದ ಸಾಧ್ಯತೆ ಡಾಲರ್ ಮೌಲ್ಯವನ್ನು ಹೆಚ್ಚಿಸಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ (Global Market) ಪ್ರತಿ ಔನ್ಸ್‌ಗೆ ಬೆಳ್ಳಿ ಬೆಲೆ $62.50 ತಲುಪಿದೆ.
ಒಂದೆಡೆ ಬೆಳ್ಳಿ ಹೀಗೆ ದಾಖಲೆ ಬರೆಯುತ್ತಿದ್ದರೆ, ಚಿನ್ನದ ಬೆಲೆ (Gold Price) ಕೂಡ ಹೆಚ್ಚೂಕಡಿಮೆ ಸ್ಥಿರವಾಗಿದೆ. ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,19,450 ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹1,30,031 ಆಗಿದೆ.
ಬೆಂಗಳೂರಿನಲ್ಲಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,19,450 ಇದ್ದರೆ, 100 ಗ್ರಾಂ ಬೆಳ್ಳಿ ಬೆಲೆ ₹19,900 ಆಗಿದೆ (ತಮಿಳುನಾಡು, ಕೇರಳದಂತಹ ಕಡೆ ₹20,700 ಇದೆ).ಬೆಳ್ಳಿ ಖರೀದಿಸುವವರಿಗೆ ಇದು ತಲೆನೋವಾದರೆ, ಹೂಡಿಕೆದಾರರಿಗೆ ಇದು ಖುಷಿಯ ಸುದ್ದಿ!
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,765 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
ಬೆಂಗಳೂರು ₹1,19,350
ಚೆನ್ನೈ ₹1,29,550
ಮುಂಬೈ ₹1,19,350
ಕೋಲ್ಕತ್ತಾ ₹1,19,350
ದೆಹಲಿ ₹1,19,500
ಕ್ಯಾನ್ಸರ್ ಅಪಾಯ ಹೆಚ್ಚಿಸುವ ಜೀನ್ ಹೊಂದಿದ್ದ ದಾನಿಯ ವೀರ್ಯದಿಂದ ಯುರೋಪ್‌ನಲ್ಲಿ 200 ಮಕ್ಕಳ ಜನನ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


