ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಮಿಲನ್ ಪ್ರಕಾಶ್ ನಿರ್ದೇಶನದ ಎರಡನೇ ಚಿತ್ರ ದಿ ಡೆವಿಲ್ ಇಂದು ( ಡಿಸೆಂಬರ್ 11 ) ರಾಜ್ಯದ್ಯಂತ ಭರ್ಜರಿಯಾಗಿ ತೆರೆಕಂಡಿದೆ.
ಇನ್ನು ಚಿತ್ರದ ಪ್ರದರ್ಶನಗಳು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಪ್ರಮುಖ ನಗರಗಳು ಹಾಗೂ ಹಲವಾರು ಪಟ್ಟಣಗಳಲ್ಲಿ ಬೆಳಗ್ಗೆ 6.30ರಿಂದಲೇ ಆರಂಭವಾಗಿದ್ದು, ಅಭಿಮಾನಿಗಳು ಎರಡು ವರ್ಷಗಳ ಬಳಿಕ ನೆಚ್ಚಿನ ನಟನ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ಮುಗಿಬಿದ್ದು ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿದ್ದಾರೆ.
ಬೆಳಗಿನ ಪ್ರದರ್ಶನಗಳ ಟಿಕೆಟ್‌ಗಳು ಎಲ್ಲೆಡೆ ಭರ್ಜರಿಯಾಗಿ ಮಾರಾಟವಾಗಿದ್ದು, ಥಿಯೇಟರ್‌ಗಳ ಮುಂದೆ ‘ಚಿತ್ರಮಂದಿರ ತುಂಬಿದೆ’ ಎಂಬ ಫಲಕವನ್ನು ಇಡಲಾಗಿದೆ. ಇನ್ನು ಅಡ್ವಾನ್ಸ್ ಬುಕಿಂಗ್‌ನಿಂದಲೇ ಬರೋಬ್ಬರಿ 7 ಕೋಟಿ ಗಳಿಕೆ ಮಾಡಿರುವ ಡೆವಿಲ್ ಮೊದಲ ದಿನ 15 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದ್ದು, ದರ್ಶನ್ ಸಿನಿ ಜರ್ನಿಯ ಅತಿದೊಡ್ಡ ಓಪನಿಂಗ್ ಇದಾಗಲಿದೆ.
ಇನ್ನು ಡೆವಿಲ್ ಚಿತ್ರದ ಬಗ್ಗೆ ಮೊದಲ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ವಿಮರ್ಶೆಗಳು ಆರಂಭವಾಗಿವೆ. ಚಿತ್ರ ಮುಗಿಯುತ್ತಿದ್ದಂತೆ ಚಿತ್ರಮಂದಿರದಿಂದಲೇ ಅಭಿಮಾನಿಗಳು ಚಿತ್ರ ಸೂಪರ್ ಎಂದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ ಬುಕ್‌ಮೈಶೋ ಹಾಗೂ ಇತರೆ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳಲ್ಲಿ ಮಾತ್ರ ಚಿತ್ರದ ವಿಮರ್ಶೆ ಮಾಡಲು ಯಾರಿಗೂ ಸಹ ಅವಕಾಶವನ್ನು ನೀಡಲಾಗಿಲ್ಲ. ಬುಕ್‌ಮೈಶೋನಲ್ಲಿ ಚಿತ್ರಕ್ಕೆ ಎಷ್ಟು ರೇಟಿಂಗ್ ಬಂದಿದೆ ಎಂಬುದನ್ನು ನೋಡಿ ಅದೆಷ್ಟೋ ಸಿನಿ ರಸಿಕರು ಚಿತ್ರವೊಂದನ್ನು ನೋಡುವುದಾ ಅಥವಾ ಬಿಡುವುದಾ ಎಂಬುದನ್ನು ನಿರ್ಧರಿಸುವುದುಂಟು. ಹೀಗೆ ಬುಕಿಂಗ್ ಅಪ್ಲಿಕೇಶನ್‌ಗಳ ವಿಮರ್ಶೆಗಳು ಚಿತ್ರವೊಂದಕ್ಕೆ ಮುಖ್ಯದ್ದಾಗಿದೆ.
ಆದರೆ ಡೆವಿಲ್ ಚಿತ್ರದ ವಿಷಯದಲ್ಲಿ ಹಾಗಿಲ್ಲ. ಚಿತ್ರ ಹೇಗಿದೆ ಎಂದು ಬುಕ್‌ಮೈಶೋನಲ್ಲಿ ರೇಟಿಂಗ್ ಹುಡುಕಿದರೆ ಅಲ್ಲಿ ರೇಟಿಂಗ್ ಬದಲಿಗೆ ‘ನ್ಯಾಯಾಲಯದ ಆದೇಶದ ಪ್ರಕಾರ ರಿವ್ಯೂ ಹಾಗೂ ರೇಟಿಂಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಬರೆದಿರುವುದನ್ನು ಕಾಣಬಹುದಾಗಿದೆ.
ಏಷ್ಯಾನೆಟ್ ಹಾಗೂ ಚಿತ್ರಲೋಕ ವರದಿಯ ಪ್ರಕಾರ ಚಿತ್ರತಂಡವೇ ಈ ಆದೇಶವನ್ನು ನ್ಯಾಯಾಲಯದ ಮೂಲಕ ಹೊರಡಿಸಿದೆ ಎನ್ನಲಾಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಇದರಿಂದಾಗಿ ನಕಲಿ ಹಾಗೂ ಉದ್ದೇಶಪೂರ್ವಕವಾಗಿ ಕೆಟ್ಟ ವಿಮರ್ಶೆಗಳು ಬರಬಹುದು ಎಂಬ ಮುನ್ನೆಚ್ಚರಿಕಾ ಕ್ರಮದಿಂದ ಈ ನಿರ್ಧಾರವನ್ನು ಚಿತ್ರತಂಡ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಮೂಲಕ ಡೆವಿಲ್ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬುಕ್‌ಮೈಶೋನಲ್ಲಿ ರಿವ್ಯೂ ನಿಷ್ಕ್ರಿಯಗೊಳಿಸಿಕೊಂಡ ಚಿತ್ರ ಎಂಬ ದಾಖಲೆಯನ್ನು ಬರೆದಿದೆ.
ಹೆಣ್ಣು ಸಿಗುತ್ತಿಲ್ಲ, ಮಠ ಕಟ್ಟಿಕೊಡಿ ಸಾರ್!” ಪಂಚಾಯಿತಿ ಮುಂದೆ ವಿಚಿತ್ರ ಬೇಡಿಕೆ ಇಟ್ಟ ಮಂಡ್ಯ ಯುವಕರು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


