ಸಕ್ಕರೆನಾಡು” ಎಂದೇ ಪ್ರಖ್ಯಾತಿ ಗಳಿಸಿರುವ ನಮ್ಮ ಮಂಡ್ಯ ಜಿಲ್ಲೆಯಿಂದ ಒಂದು ವಿಚಿತ್ರ ಸುದ್ದಿ ಬಂದಿದೆ,ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಎಂಬುದು ಹಲವು ಯುವಕರ ದೊಡ್ಡ ಚಿಂತೆಯಾಗಿದೆ. ಹೆಣ್ಣು ಸಿಗದೆ ಬೇಸರಗೊಂಡ ಯುವಕರು ಈಗ ಒಂದು ಆಶ್ಚರ್ಯಕರ ಮತ್ತು ವಿಶಿಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ!
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಈ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಯುವಕರು ಸೇರಿಕೊಂಡು ತಮ್ಮೂರಿನ ಗ್ರಾಮ ಪಂಚಾಯಿತಿಗೆ ಒಂದು ಪತ್ರ ಬರೆದಿದ್ದಾರೆ.ಮದುವೆಯಾಗದ ಈ ಯುವಕರ ಗುಂಪು ಮಾಡಿರುವ ಈ ವಿಚಿತ್ರ ಬೇಡಿಕೆ ಈಗ ಇಡೀ ರಾಜ್ಯದ ಗಮನ ಸೆಳೆದಿದ್ದು, ಸುದ್ದಿ ಎಲ್ಲೆಡೆ ವೈರಲ್ ಆಗಿದೆ
ಮದುವೆಗೆ ಹೆಣ್ಣು ಸಿಗದೆ ಹತಾಶರಾದ ಯುವಕರ ತಂಡವೊಂದು, ಇಡೀ ಜೀವನವನ್ನು ಮಠದಲ್ಲಿ ಕಳೆಯಲು ನಿರ್ಧರಿಸಿದೆ. ಈ ಮಠ ನಿರ್ಮಾಣಕ್ಕೆ ಹಣ ಮತ್ತು ಜಾಗ ಕೊಡಿ ಎಂದು ಇವರು ನೇರವಾಗಿ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ,ಈ ಆಶ್ಚರ್ಯಕರ ಘಟನೆ ಮದ್ದೂರು ತಾಲೂಕಿನ ಮರಳಿಗ ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ನಡೆದಿದೆ.
ಆ ಪತ್ರದಲ್ಲಿ ಈ ಯುವಕರು ತಮ್ಮ ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ. ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಹತಾಶರಾಗಿದ್ದು, ಅದಕ್ಕೆ ಪರಿಹಾರವಾಗಿ “ನಮಗೊಂದು ಮಠ ಕಟ್ಟಿಕೊಡಿ” ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ! ಮದುವೆಯಾಗದ ಕಾರಣಕ್ಕೆ ಇವರು ಸಂಸಾರ ಜೀವನದ ಬದಲು ಸನ್ಯಾಸದ ಕಡೆಗೆ ಒಲವು ತೋರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಯುವಕರ ವಿಶಿಷ್ಟ ಬೇಡಿಕೆಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿದಾಗ, ಅಲ್ಲಿ ನೆರೆದಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಒಂದು ಕ್ಷಣ ದಂಗಾಗಿ, ಮೌನಕ್ಕೆ ಜಾರಿದರು. ಇಂತಹ ಬೇಡಿಕೆಯನ್ನು ಅವರು ನಿರೀಕ್ಷಿಸಿರಲಿಲ್ಲ,ಇಷ್ಟಾದರೂ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಯುವಕರ ನೋವನ್ನು ಅರ್ಥ ಮಾಡಿಕೊಂಡು, ಮಠ ಕಟ್ಟುವ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
ಈ ಹಿಂದೆ ಜಿಲ್ಲೆಯ ಹಲವು ಗ್ರಾಮದ ಯುವಕರು ಮದುವೆಗಾಗಿ ದೇವರ ಮೊರೆ ಹೋಗಿದ್ದರು. ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಹರಕೆ ಕೂಡ ತೀರಿಸಿದ್ದರು. ಆದರೆ ಮರಳಿಗ ಗ್ರಾಮದ ಯುವಕರ ಈ ‘ಮಠದ ಕೋರಿಕೆ’ ಎಲ್ಲಕ್ಕಿಂತ ವಿನೂತನವಾಗಿದೆ.
ಸ್ಲಿಮ್ ಆಗಲು ₹11 ಸಾವಿರ ಖರ್ಚು: ತೂಕ ಇಳಿಕೆ ಇಂಜೆಕ್ಷನ್ ಪಡೆದು ಜೀವವನ್ನೇ ಪಣಕ್ಕಿಟ್ಟ ಯುವತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


