ಇಂದು ( ಏಪ್ರಿಲ್ 12 ) ಬೆಂಗಳೂರಿನಲ್ಲಿ ಪ್ರಸಿದ್ಧ ಕರಗ ಮಹೋತ್ಸವ ನಡೆಯಲಿದೆ. ಚಿತ್ರ ಪೌರ್ಣಮಿಯ ವಿಶೇಷ ದಿನವಾದ ಇಂದು ಮಧ್ಯರಾತ್ರಿ ಧರ್ಮರಾಯಸ್ವಾಮಿ ರಥೋತ್ಸವ ಜರುಗಲಿದ್ದು, ಕರಗ ಶಕ್ತ್ಯೋತ್ಸವ ಸಹ ನಡೆಯಲಿದೆ.
ಈ ಮಹೋತ್ಸವಕ್ಕಾಗಿ ಭಕ್ತಗಣ ಕಾಯುತ್ತಿದ್ದು, ಬೆಳಗ್ಗೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ವಾಹಿನಿಗಳ ಮೂಲಕ ಖ್ಯಾತಿಯನ್ನು ಪಡೆದಿರುವ ಬ್ರಹ್ಮಾಂಡ ಗುರೂಜಿ ಸಹ ಧರ್ಮರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.
ಚಿತ್ರ ಪೌರ್ಣಮಿಯ ಪ್ರಾಮುಖ್ಯತೆಯನ್ನು ವಿವರಿಸಿದ ಬ್ರಹ್ಮಾಂಡ ಗುರೂಜಿ ಇದೇ ದಿನದಂದು ಹನುಮ ಜನಿಸಿದ್ದು ಎಂದೂ ಸಹ ತಿಳಿಸಿದರು. ಅಲ್ಲದೇ ಈ ವರ್ಷ ರೋಗ ರುಜಿನಗಳು ಹೆಚ್ಚಾಗಲಿದೆ ಎಂದು ತಿಳಿಸಿದ ಇವರು ನರೇಂದ್ರ ಮೋದಿ ಒಂದೂವರೆ ವರ್ಷದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದರು.
ವೈರಾಗ್ಯ ಬಂದಮೇಲೆ ರಾಜೀನಾಮೆ ಕೊಡೋದು, ವಿಶೇಷವಾಗಿ ಸ್ಥಾನ ಬಿಟ್ಟುಕೊಟ್ಟು ಹೋಗುವುದು ಸಾಮಾನ್ಯ ಎಂದ ಬ್ರಹ್ಮಾಂಡ ಗುರೂಜಿ ಸನ್ಯಾಸಿಯೊಬ್ಬ ದೇಶವನ್ನು ಬಳಿಕ ನಡೆಸಿಕೊಂಡು ಹೋಗುತ್ತಾನೆ ಎಂದರು. ಈ ಮೂಲಕ ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ಮೋದಿ ರಾಜೀನಾಮೆಯ ಬಳಿಕ ಪ್ರಧಾನಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಈ ರೀತಿಯ ಹೇಳಿಕೆ ನೀಡುವ ಮುನ್ನ ಭಾರತ ಗೋರಕ್ಷಣಾ ದೇಶವಾಗಿದೆ. ಮೋದಿಯಂತಹ ಹಾಗೂ ಯೋಗಿಯಂತಹ ನಾಯಕರಿಂದ ಇದು ಸಾಧ್ಯವಾಗಿದೆ ಎಂದು ಉಲ್ಲೇಖಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


