ನಿನ್ನೆ ( ಏಪ್ರಿಲ್ 12 ) ವಿಧಾನಸೌಧಕ್ಕೆ ಜಾತಿಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ತಲುಪಿಸಲಾಯಿತು. ಸಂಪುಟದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಯಿತು.
ಏಪ್ರಿಲ್ 17ರಂದು ಈ ಜಾತಿಗಣತಿ ವರದಿಗೆಂದೇ ಸಂಪುಟ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದ್ದು, ಆ ಚರ್ಚೆಯ ಬಳಿಕ ವರದಿಯ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಹೀಗೆ ಇನ್ನೂ ವರದಿ ಅಂಗೀಕಾರವಾಗದೇ ಇದ್ದರೂ ಸಹ ಈಗಾಗಲೇ ಹಲವು ಸಮುದಾಯಗಳು ಈ ವರದಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ನಾಯಕರು ವರದಿ ಬಹಿರಂಗವಾದ ಬಳಿಕ ಪ್ರತಿಕ್ರಿಯೆ ನೀಡಿ ಎನ್ನುತ್ತಿದ್ದರೆ, ಇದು ಅವೈಜ್ಞಾನಿಕ ವರದಿ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ. ಸದ್ಯ ಇದರ ಕುರಿತು ಬಾಳೆಹೊನ್ನೂರು ರಂಭಾಪುರಿ ಶ್ರೀ ವೀರ ಸೋಮೇಶ್ವರ ಶ್ರೀ ಮಾತನಾಡಿದ್ದು, ಜಾತಿ ಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬ ಕೊರಗಿದೆ ಎಂದಿದ್ದಾರೆ. ಹೀಗಾಗಿ ಜಾತಿಗಣತಿಯನ್ನು ಮತ್ತೊಮ್ಮೆ ನಡೆಸುವುದು ಒಳ್ಳೆಯದು ಎಂದಿದ್ದಾರೆ.
ಇನ್ನು ವೀರಶೈವ ಹಾಗೂ ಒಕ್ಕಲಿಗರು ಈಗಾಗಲೇ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇಂತಹ ವರದಿಯನ್ನು ಮಂಡಿಸಿದರೆ ರಾಜ್ಯದಲ್ಲಿ ಜಾತಿ ಸಂಘರ್ಷವಾಗಲಿದೆ ಎಂದು ಮಾತನಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


