ಶಿವಮೊಗ್ಗ;ಕಾಂತಾರ ಚಾಪ್ಟರ್ 1ʼ ಸಿನಿಮಾ ಆರಂಭವಾದಾಗಿನಿಂದಲೇ ಒಂದಾದ ಬಳಿಕ ಒಂದು ಅಹಿತಕರ ಘಟನೆಗಳು ಸಂಭವಿಸುತ್ತಲೇ ಇವೆ. ಈ ಹಿಂದೆ ಹಾಸ್ಯ ನಟ ರಾಕೇಶ್ ಪೂಜಾರಿ ಅವರ ಮರಣದಿಂದ ಚಿತ್ರತಂಡದಲ್ಲಿ ಶೋಕದ ಛಾಯೆ ಮಾಸುವ ಮೊದಲೇ, ಇದೀಗ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಮೃತಪಟ್ಟಿರುವ ದುಃಖದ ಸುದ್ದಿ ತಿಳಿದುಬಂದಿದೆ.
ʼಕಾಂತಾರʼ ಚಿತ್ರದ ಚಿತ್ರೀಕರಣಕ್ಕಾಗಿ ಕೇರಳದ ತ್ರಿಶೂರ್ ಜಿಲ್ಲೆಯಿಂದ ಆಗಮಿಸಿದ್ದ ಮಿಮಿಕ್ರಿ ಹಾಗೂ ಚಲನಚಿತ್ರ ಕಲಾವಿದ ವಿಜು ವಿ.ಕೆ ಅವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಹೋಂ ಸ್ಟೇಯಲ್ಲಿ ಇದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.ವಿಜು ವಿ.ಕೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.

ʼಕಾಂತಾರʼ ಸಿನಿಮಾವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಯಶಸ್ಸು ಗಳಿಸಿದ್ದು, ಇದೀಗ ಅದರ ಮುಂದುವರಿದ ಭಾಗ ʼಕಾಂತಾರ ಚಾಪ್ಟರ್ 1ʼ ಚಿತ್ರೀಕರಣ ಹಂತದಲ್ಲಿದೆ. ಆದರೆ, ಈ ಸಿನಿಮಾದ ಚಿತ್ರೀಕರಣದ ನಡುವೆ ಕಲಾವಿದರ ನಿಧನದಂತಹ ದುರ್ಘಟನೆಗಳು ಚಿತ್ರತಂಡಕ್ಕೆ ಸಂಕಷ್ಟ ಉಂಟುಮಾಡುತ್ತಿವೆ. ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಈ ಘಟನೆಗಳಿಂದ ತೀವ್ರ ಆಘಾತದಲ್ಲಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ.
ಸೃಜನಾತ್ಮಕತೆಯ ಮೆರುಗು ನೀಡುತ್ತಿದ್ದ ಮಿಮಿಕ್ರಿ ಕಲಾವಿದ ವಿಜು ಅವರು ಹಲವಾರು ಭಾಷೆಗಳಲ್ಲಿ ನಟನೆ ಮತ್ತು ಮಿಮಿಕ್ರಿ ಪ್ರದರ್ಶನಗಳಿಂದ ಜನಪ್ರಿಯತೆ ಗಳಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಅನೇಕ ತಾರೆಯರು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿಜಯ್ ಅವರ ಪ್ರತಿಭೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.’ಕಾಂತಾರ: ಚಾಪ್ಟರ್ 1′ ಸಿನಿಮಾ ಆರಂಭವಾದ ನಂತರ ಈವರೆಗೆ ಒಟ್ಟು 3 ಸಾವುಗಳು ಸಂಭವಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಗಳು ಚಿತ್ರತಂಡ ಮತ್ತು ಅಭಿಮಾನಿಗಳ ನಡುವೆ ಚಿಂತೆಯನ್ನು ಹುಟ್ಟಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


