ಹಲ್ಲುಗಳ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳುವುದು ದೈನಂದಿನ ಜೀವನದಲ್ಲಿ ಅತ್ಯಂತ ಅಗತ್ಯವಾದ ವಿಷಯ. ಹಲ್ಲುಗಳನ್ನು ಶುಚಿಯಾಗಿಡುವುದು ಅವುಗಳ ದೀರ್ಘಕಾಲೀನ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ, ಹಲ್ಲುಜ್ಜುವ ಬ್ರಷ್‌ನ ಸರಿಯಾದ ಬಳಕೆ ಮತ್ತು ಕಾಲಕಾಲಕ್ಕೆ ಬದಲಾಯಿಸುವಿಕೆಯೂ ಅಷ್ಟೇ ಮಹತ್ವದ್ದು,ಕಾಲಕ್ರಮೇಣ ಬ್ರಷ್‌ನ ಎಳೆಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಪ್ಲೇಕ್ ಸಂಗ್ರಹವಾಗುತ್ತದೆ. ಇದರಿಂದ ಬಾಯಿಯಲ್ಲಿ ಸೋಂಕು, ದುರ್ವಾಸನೆ ಮತ್ತು ಹಲ್ಲು ಹುಳುಕು (ಕ್ಯಾವಿಟೀ) ಸಮಸ್ಯೆಗಳು ಹೆಚ್ಚಾಗುತ್ತವೆ.ದಂತ ವೈದ್ಯರು ಮತ್ತು ಸಿಡಿಸಿ ಸಂಸ್ಥೆಗಳು ಪ್ರತಿ 3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್‌ನ್ನು ಬದಲಾಯಿಸಲು ಶಿಫಾರಸು ಮಾಡುತ್ತಾರೆ.
ಹಲ್ಲುಗಳ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಪ್ರತಿ 3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್‌ನ್ನು ಬದಲಾಯಿಸುವುದು ಅತ್ಯಂತ ಮುಖ್ಯ. ಒಂದೇ ಬ್ರಷ್‌ನ್ನು ದೀರ್ಘಕಾಲ ಬಳಸುವುದು ಹಲ್ಲು ಮತ್ತು ಬಾಯಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು, ಸಾಫ್ಟ್ ಬ್ರಿಷ್ ಬಳಸುವುದು ಮತ್ತು ಬಾಯಿಯನ್ನು ಶುಚಿಯಾಗಿಡುವುದು ಹಲ್ಲುಗಳ ದೀರ್ಘಕಾಲೀನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವ ಕಾರಣಗಳು ಹೀಗಿವೆ:
ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಸಂಗ್ರಹ: ಕಾಲಾನಂತರದಲ್ಲಿ ಹಲ್ಲುಜ್ಜುವ ಬ್ರಷ್‌ನ ಬಿರುಗೂದಲುಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಪ್ಲೇಕ್ ಸಂಗ್ರಹವಾಗುತ್ತದೆ. ಪ್ರತಿದಿನ ಬಳಸಿದ ನಂತರವೂ ಬ್ರಷ್ ಸಂಪೂರ್ಣವಾಗಿ ಸ್ವಚ್ಛವಾಗುವುದಿಲ್ಲ. ಇದಕ್ಕೆ ಕಾರಣ, ನೀವು ಎಷ್ಟೇ ಚೆನ್ನಾಗಿ ತೊಳೆದರೂ ಬ್ರಷ್‌ನ ಎಳೆಗಳ ನಡುವೆ ಉಳಿದಿರುವ ಆಹಾರದ ಕಣಗಳು ಮತ್ತು ತೇವದಿಂದ ಸೂಕ್ಷ್ಮಜೀವಿಗಳು ಬೆಳೆಯುವುದು ಸಾಧ್ಯ. ಹೀಗಾಗಿ, ದೀರ್ಘಕಾಲ ಬ್ರಷ್ ಬಳಸುವುದು ಹಲ್ಲುಗಳು ಮತ್ತು ಬಾಯಿಯ ಆರೋಗ್ಯಕ್ಕೆ ಹಾನಿಕಾರಕವಾಗಬಹುದು
ಬ್ರಷ್ ಎಳೆಗಳ ಸವೆತ: ಹಲ್ಲುಜ್ಜುವ ಬ್ರಷ್‌ನ ಎಳೆಗಳು ಸಮಯದೊಂದಿಗೆ ಬಾಗಿ, ಸವೆದು ಹೋದರೆ ಅದು ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಅಸಮರ್ಥವಾಗುತ್ತದೆ. ಇದರಿಂದ ಹಲ್ಲುಗಳ ಮೇಲೆ ಪ್ಲೇಕ್ ಮತ್ತು ಆಹಾರದ ಕಣಗಳು ಉಳಿಯುತ್ತವೆ।
ಸೋಂಕಿನ ಅಪಾಯ: ನಿಮಗೆ ಶೀತ, ಜ್ವರ ಅಥವಾ ಬಾಯಿ ಹುಣ್ಣು ಇದ್ದರೆ, ಆ ಕಾಯಿಲೆಗಳಿಂದ ಬರುವ ಬ್ಯಾಕ್ಟೀರಿಯಾಗಳು ಹಲ್ಲುಜ್ಜುವ ಬ್ರಷ್ ಮೇಲೆ ಉಳಿದು ನಿಮ್ಮನ್ನು ಮತ್ತೆ ಅಸ್ವಸ್ಥಗೊಳಿಸಬಹುದು.
ದುರ್ವಾಸನೆ ಮತ್ತು ಹಾನಿ: ಹಳೆಯ ಬ್ರಷ್‌ಗಳು ದುರ್ವಾಸನೆ ಬೀರುವ ಸಾಧ್ಯತೆ ಇರುತ್ತದೆ ಮತ್ತು ಹಲ್ಲುಗಳಿಗೆ ಹಾನಿ ಮಾಡಬಹುದು. ಹೀಗಾಗಿ, ದುರ್ವಾಸನೆ ಬಂದಾಗ ಅಥವಾ ಹಲ್ಲುಜ್ಜುವಾಗ ನೋವು ಉಂಟಾದಾಗ ಬ್ರಷ್ ಬದಲಾಯಿಸಬೇಕು।ಟೂತ್ ಬ್ರಷ್‌ಗಳು ದುರ್ವಾಸನೆ ಬೀರುತ್ತಿದ್ದರೂ ಅದನ್ನೇ ಮತ್ತೆ ತೊಳೆದು, ಪೇಸ್ಟ್ ಹಾಕಿ ಹಲ್ಲುಜ್ಜುತ್ತಾರೆ. ಇದು ತಪ್ಪು. ಬ್ರಷ್‌ಗಳ ಎಳೆಗಳು ಒತ್ತೋತ್ತಾಗಿರುವುದರಿಂದ ಹಲ್ಲುಜ್ಜಿದ ಮೇಲೆ ಸರಿಯಾಗಿ ತೊಳೆಯದೇ ಇಟ್ಟರೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗಿ ದುರ್ಗಂಧ ಬೀರಲು ಆರಂಭವಾಗುತ್ತದೆ.
ದಂತ ವೈದ್ಯರ ಸಲಹೆ: ಸಾಮಾನ್ಯವಾಗಿ ಪ್ರತಿ 3 ತಿಂಗಳಿಗೊಮ್ಮೆ ಹೊಸ ಹಲ್ಲುಜ್ಜುವ ಬ್ರಷ್ ಬಳಸುವಂತೆ ಶಿಫಾರಸು ಮಾಡಲಾಗಿದೆ. ಇದರಿಂದ ಹಲ್ಲುಗಳ ಆರೋಗ್ಯ ಕಾಪಾಡಬಹುದು।ಆದರೆ ಅದಕ್ಕೂ ಮೊದಲು ನಿಮ್ಮ ಹಲ್ಲುಜ್ಜುವ ಬ್ರಷ್ ಹಾನಿಗೊಳಗಾಗಿದ್ದರೆ, ನೀವು ಅದನ್ನು ಬದಲಾಯಿಸಬೇಕು.
ಹಾರ್ಡ್ ಬ್ರಷ್ ಬಳಕೆ ತಪ್ಪಿಸಿ,
ಹಲ್ಲುಗಳ ಆರೋಗ್ಯಕ್ಕಾಗಿ ಯಾವ ರೀತಿಯ ಟೂತ್‌ಬ್ರಷ್‌ನ್ನು ಬಳಸುವುದೇ ಮುಖ್ಯ. ಬಹುಪಾಲು ಜನರು ದಪ್ಪ ಎಳೆಗಳಿರುವ (ಹಾರ್ಡ್) ಬ್ರಷ್‌ಗಳನ್ನು ಬಳಸುವ ಕಾರಣದಿಂದ ಹಲ್ಲುಗಳ ಎನಾಮೆಲ್‌ಗೆ ಹಾನಿಯಾಗುತ್ತದೆ. ಹಾರ್ಡ್ ಬ್ರಷ್ ಬಳಕೆ ಮಾಡಿದರೆ ಹಲ್ಲುಗಳಲ್ಲಿ ತೀವ್ರವಾದ ನೋವು, ಗಮ್ ಸೇರಿದಂತೆ ಇತರ ಸಮಸ್ಯೆಗಳೂ ಉಂಟಾಗಬಹುದು.ಹೀಗಾಗಿ, ಆಪ್ತ ತಜ್ಞರ ಸಲಹೆ ಪ್ರಕಾರ ಮೃದುವಾದ ಎಳೆಗಳಿರುವ (ಸಾಫ್ಟ್ ಬ್ರಿಸಲ್ಸ್) ಬ್ರಷ್‌ಗಳನ್ನೇ ಬಳಸುವುದು ಉತ್ತಮ. ಇವು ಹಲ್ಲುಗಳನ್ನು ಎಚ್ಚರಿಕೆಯಿಂದ ಶುದ್ಧಗೊಳಿಸುತ್ತವೆ ಮತ್ತು ಹಾನಿಯನ್ನು ತಪ್ಪಿಸುತ್ತವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


