ಬೆಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸತತ ಮೂರನೇ ಬಾರಿಗೆ ಅಧಿಕಾರ ನಡೆಸುತ್ತಿದ್ದು, ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮೂರನೇ ಅವಧಿಯನ್ನು ಆರಂಭಿಸಿ ವರ್ಷ ತುಂಬಿದೆ.
ಹೀಗೆ ಮೂರನೇ ಅವಧಿಯ ಮೊದಲ ವರ್ಷಾಚರಣೆ ಹಾಗೂ ಒಟ್ಟಾರೆ 11 ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆ ಬಿಜೆಪಿ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಕುರಿತ ಜಾಹೀರಾತುಗಳನ್ನು ಹಂಚಿದ್ದು, ಇದರ ವಿರುದ್ಧ ವಿರೋಧ ಪಕ್ಷಗಳು ಟೀಕೆ ನಡೆಸಿವೆ.
ಮೋದಿ ಸರ್ಕಾರ 11 ವರ್ಷ ಪೂರೈಸಿದ್ದರ ಬಗ್ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದು, ಮೋದಿ ಸರ್ಕಾರ ಸಾಧನೆಗಳನ್ನು ಕಡಿದು ಕಟ್ಟೆ ಹಾಕಿಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ ಆಗಿದೆ. ಅವರು ಸಾಧನೆಗಳನ್ನು ಕಡಿದು ಕಟ್ಟೆ ಹಾಕಿಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡುತ್ತಾ ಮಾತನ್ನು ಆರಂಭಿಸಿದ ಪ್ರದೀಪ್ ಈಶರ್ ಮೋದಿ ಸರ್ಕಾರ ರೈತ ವಿರೋಧಿ ಎಂದರು. ರೈತ ಖರೀದಿಸುವ ಟ್ರ್ಯಾಕ್ಟರ್ ಮೇಲೆ 12% ಜಿಎಸ್‌ಟಿ, ಹಾಳಾಗ್ ಹೋಗ್ಲಿ ಅಂತ ಶಾಪ ಹಾಕಿ ಟ್ರ್ಯಾಕ್ಟರ್ ತಗೊಂಡು ಟೈರ್ ಪಂಚರ್ ಆದರೆ ಆ ಟೈರ್ ಮೇಲೆ 18% ಜಿಎಸ್‌ಟಿ, ಅದೂ ಹೋಗಲಿ ಅಂತ ಟ್ರ್ಯಾಕ್ಟರ್ ಕೆಟ್ಟೋಗಿ ಬಿಡಿ ಭಾಗಗಳನ್ನು ತೆಗೆದುಕೊಂಡರೆ ಅದರ ಮೇಲೆ 28% ಜಿಎಸ್‌ಟಿ, ಹೀಗಾಗಿ ಮೋದಿ ಸರ್ಕಾರ ರೈತ ವಿರೋಧಿ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


