ಚೆನ್ನೈ: ಭಾರತದ ಪ್ರಸಿದ್ಧ ಸ್ಪಿನ್ನರ್ ರವಿ ಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ತಮ್ಮ ಪ್ರಕಾರದ ಐಪಿಎಲ್ 2025 ಟೂರ್ನಿಮೆಂಟ್‌ನ ಅತ್ಯುತ್ತಮ ತಂಡವನ್ನು ಘೋಷಿಸಿದ್ದು, ಈ ಪ್ರಕಟಣೆ ಚರ್ಚೆಗೆ ಗ್ರಾಸವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಅಶ್ವಿನ್ ತಮ್ಮ ಆಯ್ಕೆಯಲ್ಲಿ ತಂಡವನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೊರಗುಳಿದಿರುವುದು ಗಮನಾರ್ಹವಾಗಿದೆ.
ಅಶ್ವಿನ್ ತಂಡದಲ್ಲಿ ಸಾಯಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಕುಮಾರ್ ಯಾದವ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜೀತೇಶ್ ಶರ್ಮಾ, ಕುಲ್‌ದೀಪ್ ಯಾದವ್, ಜೋಷ್ ಹ್ಯಾಜಲ್‌ವುಡ್, ಜಸ್‌ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣಾ ಅವರನ್ನು ಆರಿಸಿದ್ದಾರೆ. ಈ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ, ಅವರು ಐಪಿಎಲ್ 2025ರಲ್ಲಿ 657 ರನ್ ಗಳಿಸಿದ್ದರೂ ಸಹ ಹೊರಗುಳಿದಿದ್ದು, ಅಭಿಮಾನಿಗಳಲ್ಲಿ ಆಕ್ಷೇಪಣೆಗಳು ಎದುರಾಗಿವೆ. ಆದರೆ ಅಶ್ವಿನ್ ತಮ್ಮ ಆಯ್ಕೆಯಲ್ಲಿ ಬೌಲಿಂಗ್ ಲೈನ್‌ಅಪ್ ತುಂಬಾ ಶಕ್ತಿಶಾಲಿ ಎಂದು ವಿವರಿಸಿದ್ದಾರೆ.
ಈ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಹೊರಗುಳಿಯುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರ ಅಭಿಮಾನಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಇನ್ನು ಅಶ್ವಿನ್ ಶ್ರೇಯಸ್ ಐಯ್ಯರ್ ಅವರನ್ನು ನಾಯಕನ ಸ್ಥಾನಕ್ಕೆ ಆರಿಸಿರುವುದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರೇಯಸ್ ಐಯ್ಯರ್ ಉತ್ತಮ ನಾಯಕ ಹೌದು, ಆದರೆ ರಜತ್ ಪಟಿದಾರ್ ಗೆದ್ದ ಪಂದ್ಯಗಳಲ್ಲೆಲ್ಲ ಅದ್ಭುತವಾಗಿ ಬೌಲಿಂಗ್ ಬಳಕೆ ಮಾಡಿದ್ದು, ಅತ್ಯುತ್ತಮ ಮಟ್ಟದಲ್ಲಿ ನಾಯಕತ್ವ ನಿರ್ವಹಿಸಿದ್ದಾರೆ. ಹೀಗಾಗಿ ರಜತ್ ಆರಿಸಬೇಕಿತ್ತು ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


