ಅಹ್ಮದಾಬಾದ್: ಜೂನ್ 12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್‌ಇಂಡಿಯಾ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಸಾವನ್ನಪ್ಪಿದ್ದರು.
ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡ ವಿಮಾನ ಅಹ್ಮದಾಬಾದ್‌ನ ಮೇಘಾನಿ ನಗರ ಪ್ರದೇಶದಲ್ಲಿನ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದು, ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 270 ಮಂದಿ ಈ ಅವಘಡದಲ್ಲಿ ಮೃತಪಟ್ಟರು.
ಈ ದುರಂತಕ್ಕೆ ಕಾರಣವೇನಿರಬಹುದು ಎಂದು ಹಲವು ದೊಡ್ಡ ಚರ್ಚೆಗಳು ನಡೆದವು. ನುರಿತ ಪೈಲಟ್‌ಗಳನ್ನು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಇದೀಗ ವಿಮಾನ ಅಪಘಾತ ತನಿಖಾ ಬ್ಯುರೋ ( ಎಎಐಬಿ ) ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಎಂಜಿನ್ 1 ಹಾಗೂ ಎಂಜಿನ್ 2ಗೆ ಇಂಧನ ಪೂರೈಕೆ ನಿಂತಿದ್ದೇ ವಿಮಾನ ಪತನಕ್ಕೆ ಕಾರಣ ಎನ್ನಲಾಗಿದೆ. ಇಂಧನ ಸ್ವಿಚ್ ರನ್‌ನಿಂದ ಕಟ್‌ಆಫ್‌ಗೆ ಬದಲಾಗಿದ್ದು ಅಪಘಾತಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಓರ್ವ ಪೈಲಟ್ ಸ್ವಿಚ್ ಅನ್ನು ಏಕೆ ಬದಲಿಸಿದ್ದೀರಿ ಎಂದು ಪ್ರಶ್ನೆಯನ್ನು ಕೇಳಿದ್ದು, ಮತ್ತೋರ್ವ ಪೈಲಟ್ ನಾನು ಬದಲಿಸಿಲ್ಲ ಎಂದು ಹೇಳಿರುವುದು ರೆಕಾರ್ಡ್ ಆಗಿದೆ. ಹೀಗಾಗಿ ಇದೀಗ ಅವಘಡಕ್ಕೆ ಕಾರಣ ಪೈಲಟ್‌ಗಳಾ? ಸ್ವಿಚ್ ಆಫ್ ಆಗಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಪಿಎಂ-ವಾಣಿ ಯೋಜನೆ: ಜನಸಾಮಾನ್ಯರಿಗೆ ವೇಗದ ವೈ-ಫೈ ತಲುಪಿಸುವ ಡಿಜಿಟಲ್ ಕ್ರಾಂತಿ
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


