ನವದೆಹಲಿ: ಫಾಸ್ಟಾಗ್ ಸ್ಟಿಕರನ್ನು ವಾಹನಕ್ಕೆ ಅಂಟಿಸದೆ ಕೈಯಲ್ಲಿ ಹಿಡಿದುಕೊಂಡು ಬಂದು ಟೋಲ್ನಲ್ಲಿರುವ ಸ್ಕ್ಯಾನರ್ಗೆ ತೋರಿಸುವ ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಕ್ರವಾರ ( ಜುಲೈ 11 ) ತಿಳಿಸಿದೆ.
ಟೋಲ್ ಕಾರ್ಯಾಚರಣೆ ಸುಗಮವಾಗಿ ನಡೆಯಬೇಕೆಂಬ ಉದ್ದೇಶ ಇದರ ಹಿಂದಿದೆ. ಕೆಲವರ ಇಂತಹ ವರ್ತನೆಯಿಂದ ತಾಂತ್ರಿಕವಾಗಿ ಸಮಸ್ಯೆ ಆಗುತ್ತದೆ. ವಿನಾಕಾರಣ ಟೋಲ್ಗಳಲ್ಲಿ ಸಮಯ ವ್ಯರ್ಥವಾಗುತ್ತದೆಯಲ್ಲದೆ, ಇತರ ಗ್ರಾಹಕರಿಗೆ ತೊಂದರೆಯಾಗುತ್ತದೆ. ಈ ರೀತಿ ಮಾಡುವ ಬಳಕೆದಾರರ ವಿವರಗಳನ್ನು ತಕ್ಷಣವೇ ತನಗೆ ಒದಗಿಸುವಂತೆ ಟೋಲ್ ಸಂಗ್ರಹ ಮಾಡುವ ಸಂಸ್ಥೆಗಳಿಗೆ ಎನ್ಎಚ್ಐ ಸೂಚಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2025-26ರಲ್ಲಿ 3.4 ಲಕ್ಷ ಕೋಟಿ ರೂ. ಮೌಲ್ಯದ 124 ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ಯೋಜನೆಗಳಿಗೆ ಟೆಂಡರ್ ಆಹ್ವಾನಿಸಲು ಉದ್ದೇಶಿಸಿದೆ. 2025- 26ರಲ್ಲಿ ಒಟ್ಟು 6,376 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಟೆಂಡ ಆಗಲಿದೆ. ಗೊರಖಪುರ- ಕಿಷನಗಂಜ- ಸಿಲಿಗುರಿ (476 3.De) ಯೋಜನೆಯನ್ನು ಎಐ, ಹೈಬ್ರಿಡ್ ಆನ್ವಿಟಿ ಮಾಡೆಲ್ ರೂಪದಲ್ಲಿ ಕೈಗೆತ್ತಿಕೊಳ್ಳಲಿದೆ. ಕಿ.ಮೀ. ಉದ್ದದ ಥಾರಾದ್- ದೀಸಾ- ಮೆಹಸಾನಾ- ಅಹಮದಾಬಾದ್- ಪ್ಯಾಕೇಜ್ 1 ಯೋಜನೆಯನ್ನು ಬಿಲ್ ಆಪರೇಟ್ ಮತ್ತು ಟ್ರಾನ್ಸ್ಫರ್ (ಬಿಒಟಿ) ಮಾದರಿಯಲ್ಲಿ ತೆಗೆದುಕೊಳ್ಳಲಿದೆ.
ಏರ್ಇಂಡಿಯಾ ದುರಂತಕ್ಕೆ ಪೈಲಟ್ಗಳೇ ಕಾರಣ? ಪ್ರಾಥಮಿಕ ವರದಿಯಲ್ಲಿ ಕೊನೆ ಸಂಭಾಷಣೆ ಬಹಿರಂಗ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


