ಶಿವಮೊಗ್ಗ: ದಶಕಗಳ ಕನಸು ಸಿಗಂದೂರು ಸೇತುವೆ ಕೊನೆಗೂ ನನಸಾಗಿದ್ದು, ಜುಲೈ 14ರಂದು ಉದ್ಘಾಟನೆಗೆ ಸಿದ್ಧವಾಗಿದೆ. ಸೇತುವೆ ಉದ್ಘಾಟನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದು, ಸದ್ಯ ಉದ್ಘಾಟನೆಗೂ ಮುನ್ನವೇ ವಿವಾದವೊಂದು ತಲೆದೋರಿದೆ.
ಶಿವಮೊಗ್ಗದ ಬಿದರೆ ಗ್ರಾಮದ ನಿವಾಸಿ ಕೆ ಹರನಾಥ್ ಎಂಬುವವರು ಹೈಕೋರ್ಟ್‌ಗೆ ಸಿಗಂದೂರು ಸೇತುವೆಗೆ ಯಡಿಯೂರಪ್ಪನವರ ಹೆಸರನ್ನು ಇಡಬೇಕು ಎಂದು ನಿರ್ದೇಶನ ನೀಡಿ ಎಂದು ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಇನ್ನು ಈ ಹಿಂದೆ ಸೇತುವೆ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಟಿಯೊಂದರಲ್ಲಿ ಬಿಎಸ್ ಯಡಿಯೂರಪ್ಪನವರ ಪುತ್ರ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮಾತನಾಡಿ ಸಿಗಂದೂರು ಸೇತುವೆಗೆ ಚೌಡೇಶ್ವರಿ ತಾಯಿಯ ಹೆಸರನ್ನು ಆಯ್ಕೆ ಮಾಡಲಾಗಿದೆ, ರಾಜ್ಯ ಸರ್ಕಾರ ಎನ್‌ಒಸಿ ಕೊಟ್ಟರೆ ಮುಂದುವರಿಯುತ್ತೇವೆ ಎಂದಿದ್ದರು.
ಇದೀಗ ಈ ವಿಚಾರ ಸೇತುವೆ ನಾಮಕರಣಕ್ಕೆ ಸಂಬಂಧಿಸಿದಂತೆ ವಿವಾದ ಹುಟ್ಟುಹಾಕಿದೆ.
ಕೈನಲ್ಲಿ ಫಾಸ್ಟಾಗ್ ಹಿಡಿದು ಪ್ರಯಾಣಿಸುತ್ತೀರಾ? ಹಾಗಾದ್ರೆ ಕಪ್ಪುಪಟ್ಟಿಗೆ ಸೇರಿಸುತ್ತಾರೆ ಹುಷಾರ್!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


