ನವದೆಹಲಿ: ಮೇರು ನಟ ಹಾಗೂ ಶ್ರೇಷ್ಠ ಕಲಾವಿದರಾಗಿದ್ದ ಡಾ. ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿರುವುದು ಅತ್ಯಂತ ನೋವುಂಟು ಮಾಡಿದೆ. ರಾತ್ರೋ ರಾತ್ರಿ ಈ ಕೆಲಸ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ವಿಷ್ಣುವರ್ಧನ್ ಓರ್ವ ಶ್ರೇಷ್ಠ ಕಲಾವಿದ. ತಮ್ಮ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟವರಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಜನರಿಗೆ ಆಶ್ರಯ ನೀಡಿದ್ದ ವ್ಯಕ್ತಿ ಅವರು. ಹೀಗಿರುವಾಗ ಅವರ ಸಮಾಧಿ ನೆಲಸಮ ಮಾಡಿದ್ದು ಎಷ್ಟು ಸರಿ? ಅದಲ್ಲದೆ, ರಾತ್ರೋರಾತ್ರಿ ಸಮಾಧಿಯನ್ನು ನೆಲಸಮ ಮಾಡಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯಬೇಕು. ಈ ರೀತಿ ನೆಲಸಮ ಮಾಡುವುದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಯಾವ ಖಾಸಗಿಯವರ ಲಾಬಿಗೆ ಸರ್ಕಾರ ಒಳಪಟ್ಟಿದೆ ಎಂಬುದು ತಿಳಿಯದಾಗಿದೆ. ಇಷ್ಟು ಸಮಯವಾದರೂ ಸಹ ಆ ಭೂಮಿಯನ್ನು ಸರ್ಕಾರ ಏಕೆ ವಶಪಡಿಸಿಕೊಂಡಿಲ್ಲ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಮನವಿ ಮಾಡಿದ್ದೇನೆ. ರಾಜ್ ಕುಮಾರ್ ಅವರ ಸಮಾಧಿಗೆ ಸಿಗುವ ಗೌರವ ವಿಷ್ಣುವರ್ಧನ್ ಅವರ ಸಮಾಧಿಗೂ ಸಿಗಬೇಕು. ಆ ಭೂಮಿಯ ಮಾಲೀಕರಿಗೆ ಪರಿಹಾರ ನೀಡಿ, ಅಲ್ಲಿ ಕಲಾಗ್ರಾಮ ಮಾಡಬೇಕು. ಸಿಎಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮೆಟ್ರೊ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


