ಬೆಂಗಳೂರು: ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅನಾಮಿಕನೋರ್ವ ತನ್ನ ಅವಧಿಯಲ್ಲಿ ಕೊಲೆ, ಅತ್ಯಾಚಾರ ಕೊಲೆಗಳು ನಡೆದಿದ್ದು, ಅವುಗಳ ಹೆಣಗಳನ್ನು ತಾನೇ ಹೂತಿದ್ದಾಗಿ ಹೇಳಿಕೆ ನೀಡಿ ದೂರು ನೀಡಿದ್ದ.
ಅದರಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದು, ಸದ್ಯ ಎಸ್ಐಟಿ ಅಧಿಕಾರಿಗಳು ಅನಾಮಿಕನ ಸಹಾಯದೊಂದಿಗೆ ಅಸ್ತಿಪಂಜರಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಅನಾಮಿಕ 13 ಸ್ಥಳಗಳನ್ನು ಗುರುತಿಸಿದ್ದು, ಈ ಪೈಕಿ ಆರನೇ ಪಾಯಿಂಟ್ನಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಅಂತಿಮ ಸ್ಥಳದ ಉತ್ಖನನ ಕಾರ್ಯ ಇಂದು ( ಆಗಸ್ಟ್ 12 ) ಜರುಗುತ್ತಿದೆ.
ಈ ಕುರಿತು ಮೋದಿ ಹಿಂಬಾಲಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದು, ಇದು ಧರ್ಮಸ್ಥಳದ ಹೆಸರಿಗೆ ಮಸಿ ಬಳೆಯಲು ನಡೆದಿರುವ ಷಡ್ಯಂತ್ರ್ಯವೇ ಹೊರತು ನಿಜವಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಎಸ್ಐಟಿ ತನಿಖೆ ಮಾಡದೇ ಇದ್ದಿದ್ದರೆ ಬುರುಡೆ ಕಥೆಯನ್ನು ಜನರು ನಂಬುತ್ತಿದ್ದರು, ಇದೀಗ ಅದೆಲ್ಲ ಬೊಗಳೆಗಳ ಕಂತೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
ಇನ್ನು ಎಸ್ಐಟಿ ತನಿಖೆಗೆ ಕಾರಣನಾದ ಅನಾಮಿಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಇದರ ಹಿಂದೆ ಯಾರಿದ್ದಾರೋ ಅವರ ವಿರುದ್ಧ ತನಿಖೆ ನಡೆಯಬೇಕು ಎಂದು ಸೂಲಿಬೆಲೆ ಆಗ್ರಹಿಸಿದ್ದಾರೆ.
ಮೆಟ್ರೊ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


