Thursday, September 3, 2026
spot_img
More
    spot_img
    HomeInternationalಸುಂಕದ ಕುರಿತ ಭಿನ್ನಾಭಿಪ್ರಾಯದ ಹೊರತಾಗಿಯೂ ಭಾರತ ನಮ್ಮೊಂದಿಗೆ ಚೆನ್ನಾಗಿದೆ ಎಂದ ಅಮೆರಿಕಾ

    ಸುಂಕದ ಕುರಿತ ಭಿನ್ನಾಭಿಪ್ರಾಯದ ಹೊರತಾಗಿಯೂ ಭಾರತ ನಮ್ಮೊಂದಿಗೆ ಚೆನ್ನಾಗಿದೆ ಎಂದ ಅಮೆರಿಕಾ

    ವಾಷಿಂಗ್ಟನ್: ಇತ್ತೀಚಿನ ಸುಂಕ ವಿವಾದ ಹಾಗೂ ರಷ್ಯಾದ ತೈಲ ಖರೀದಿಯ ಬಗ್ಗೆ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧಗಳು ಉತ್ತಮವಾಗಿವೆ ಎಂದು ಭಾರತದ ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಿರುವ ಸೆರ್ಗಿಯೊ ಗೋರ್ ಹೇಳಿದ್ದಾರೆ.

    Advertisement

    ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಿತ ಸಮಸ್ಯೆಗಳನ್ನು ಮುಂಬರುವ ದಿನಗಳಲ್ಲಿ ಪರಿಹರಿಸಬಹುದು.ಆದರೆ ಭಾರತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ಸೆರ್ಗಿಯೊ ಗೋರ್ ಹೇಳಿದರು. ಬ್ರಿಕ್?ಸನೊಳಗಿನ ವಿವಿಧ ವಿಷಯಗಳಲ್ಲಿ ಭಾರತ ನಮ್ಮ ಪರವಾಗಿ ನಿಂತಿದೆ ಎಂದರು.

    ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಸೆನೆಟ್ ಸಮಿತಿಯ ಮುಂದೆ ಸೆರ್ಗಿಯೊ ಗೋರ್ ಅವರನ್ನು ಪರಿಚಯಿಸಿದರು. ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಗಳು ಮುಖ್ಯವಾಗಿವೆ, ಅದು ಭವಿಷ್ಯದಲ್ಲಿ ವಿಶ್ವದ ನಕ್ಷೆಯನ್ನು ನಿರ್ಧರಿಸುತ್ತದೆ ಎಂದು ರೂಬಿಯೊ ಹೇಳಿದರು.ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ರೂಬಿಯೊ ಹೇಳಿದರು.

    ಅಮೆರಿಕ-ಭಾರತ ಸಂಬಂಧಗಳ ಮಹತ್ವದ ಬಗ್ಗೆ ಅವರು ವಿಶೇಷ ಒತ್ತು ನೀಡಿದರು ಮತ್ತು ಇದು ಪ್ರಸ್ತುತ ಅಮೆರಿಕಕ್ಕೆ ಅತ್ಯಂತ ಪ್ರಮುಖವಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದಾಗಿದೆ ಎಂದು ಹೇಳಿದರು.ಅಧ್ಯಕ್ಷ ಟ್ರಂಪ್ ನಾಯಕರ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.ಬ್ರಿಕ್?ಸ ಗುಂಪಿನಲ್ಲಿ ಭಾರತ ಯಾವಾಗಲೂ ನಮ್ಮೊಂದಿಗಿದೆ, ಅನೇಕ ಬ್ರಿಕ್?ಸ ದೇಶಗಳು ದೀರ್ಘಕಾಲದವರೆಗೆ ಯುಎಸ್ ಡಾಲರ್‍ನಿಂದ ದೂರವಿರಲು ಪ್ರಯತ್ನಿಸುತ್ತಿವೆ, ಆದರೆ ಭಾರತ ಇದನ್ನು ತಡೆಯಲು ಕೆಲಸ ಮಾಡಿದೆ.

    ಬ್ರಿಕ್ಸ್‌ನ ಉಳಿದ ದೇಶಗಳಿಗಿಂತ ಭಾರತ ನಮ್ಮೊಂದಿಗೆ ಮಾತನಾಡಲು ಮತ್ತು ಸಂಪರ್ಕ ಸಾಧಿಸಲು ಹೆಚ್ಚು ಸಿದ್ಧವಾಗಿದೆ ಎಂದು ಗೋರ್ ಹೇಳಿದ್ದಾರೆ.ವಾಸ್ತವವಾಗಿ ಎರಡೂ ಕಡೆಯವರು ಇದರ ಸೂಕ್ಷ್ಮ ಅಂಶಗಳನ್ನು ಚರ್ಚಿಸುತ್ತಿದ್ದಾರೆ. ಇತರ ದೇಶಗಳಿಗಿಂತ ಭಾರತದಿಂದ ನಮಗೆ ಹೆಚ್ಚಿನ ನಿರೀಕ್ಷೆಗಳಿವೆ. ಮುಂಬರುವ ವಾರಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಸೆರ್ಗಿಯೊ ಗೋರ್ ಭಾರತವನ್ನು ಅಮೆರಿಕದ ಕಾರ್ಯತಂತ್ರದ ಪಾಲುದಾರ ಎಂದು ಬಣ್ಣಿಸಿದರು ಮತ್ತು ಅಧ್ಯಕ್ಷ ಡೊನಾಲ್?ಡ ಟ್ರಂಪ್ ಅವರ ಬಲವಾದ ನಾಯಕತ್ವದಲ್ಲಿ, ಅವರು ಭಾರತದೊಂದಿಗೆ ಸಂಬಂಧವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಧರ್ಮಸ್ಥಳದ ವಸತಿಗೃಹಗಳಲ್ಲಿ ಮಹಿಳೆಯರ ನಿಗೂಢ ಸಾವು, ಆತುರಾತುರವಾಗಿ ಸಮಾಧಿ; ಎಸ್‌ಐಟಿಗೆ ದೂರು

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading