Tuesday, August 4, 2026
spot_img
More
    spot_img
    HomeEntertainmentರಶ್ಮಿಕಾ ಚಿತ್ರ ನೋಡಿ ನಿರ್ದೇಶಕನ ಮುಂದೆಯೇ ದುಪ್ಪಟ್ಟ ತೆಗೆದುಹಾಕಿದ ಯುವತಿ; ಇಂತಹ ಚಿತ್ರಗಳಿಂದ ಸನಾತನ ಧರ್ಮ...

    ರಶ್ಮಿಕಾ ಚಿತ್ರ ನೋಡಿ ನಿರ್ದೇಶಕನ ಮುಂದೆಯೇ ದುಪ್ಪಟ್ಟ ತೆಗೆದುಹಾಕಿದ ಯುವತಿ; ಇಂತಹ ಚಿತ್ರಗಳಿಂದ ಸನಾತನ ಧರ್ಮ ಹಾಳು ಎಂದ ಹಿಂದೂಗಳು

    ನಟಿ ರಶ್ಮಿಕಾ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದು, ಸದ್ಯ ಈ ಚಿತ್ರ ಟಾಲಿವುಡ್‌ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಹಿಳೆಯರ ಸಬಲೀಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸದಾ ಹೋರಾಡುವ ಹಾಗೂ ಈ ಹಿಂದೆ ತಮಿಳು ಚಿತ್ರರಂಗದ ಕಾಸ್ಟಿಂಗ್‌ ಕೌಚ್‌ ಬಗ್ಗೆ ವೇದಿಕೆಯಲ್ಲೇ ಬಹಿರಂಗವಾಗಿ ಚಾಟಿ ಬೀಸಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಪತಿ ರಾಹುಲ್‌ ರವೀಂದ್ರನ್‌ ನಿರ್ದೇಶನ ಈ ಚಿತ್ರಕ್ಕಿದೆ.

    Advertisement

    ರಾಹುಲ್‌ ರವೀಂದ್ರನ್‌ ಸಹ ಪತ್ನಿಯ ಹಾದಿಯಲ್ಲೇ ಮಹಿಳೆಯರ ಹಿತಾಸಕ್ತಿ, ಸ್ವಾತಂತ್ರ್ಯ, ಪುರುಷರ ದಬ್ಬಾಳಿಕೆಯ ವಿರುದ್ಧ ಹೋರಾಟವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಆ ಚಿತ್ರಕ್ಕೆ ʼದ ಗರ್ಲ್‌ಫ್ರೆಂಡ್‌ʼ ಎಂದು ಹೆಸರಿಟ್ಟಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ತಮ್ಮ ಅಭಿನಯದ ಮೂಲಕ ಭಾರೀ ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಳ್ಳುತ್ತಿದ್ದಾರೆ.

    ಇನ್ನು ಚಿತ್ರಕ್ಕೆ ಬುಕ್‌ಮೈಶೋನಲ್ಲಿ ಪ್ರೇಕ್ಷಕರು 10ಕ್ಕೆ 9 ರೇಟಿಂಗ್‌ ಕೊಟ್ಟಿದ್ದು, ವಿಮರ್ಶಕರೂ ಸಹ ಒಳ್ಳೆಯ ವಿಮರ್ಶೆಯನ್ನೇ ನೀಡಿದ್ದಾರೆ. ಆದರೆ ಚಿತ್ರದ ಕುರಿತು ಕೆಲ ಪುರುಷರು ಮೂಗುಮುರಿದಿದ್ದಾರೆ. ಇಂತಹ ಚಿತ್ರಗಳಿಂದ ಸನಾತನ ಧರ್ಮದ ಪಾಲನೆಯನ್ನು ಮಹಿಳೆಯರು ಮರೆತುಬಿಡುತ್ತಿದ್ದಾರೆ ಎಂದು ಆತಂಕ ಹೊರಹಾಕಿದ್ದಾರೆ.

    ಅದರಲ್ಲೂ ಚಿತ್ರಮಂದಿರವೊಂದರಲ್ಲಿ ಚಿತ್ರ ವೀಕ್ಷಿಸಿದ ಯುವತಿಯೋರ್ವಳು ಪರದೆಯ ಮುಂದೆ ನಿಂತು ಒಳ್ಳೆಯ ಚಿತ್ರ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಚಿತ್ರಮಂದಿರಕ್ಕೆ ಆಗಮಿಸಿದ್ದ ನಿರ್ದೇಶಕ ರಾಹುಲ್‌ ರವೀಂದ್ರನ್‌ಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಬಳಿಕ ಕ್ಲೈಮ್ಯಾಕ್ಸ್‌ ವೀಕ್ಷಿಸಿದ ಬಳಿಕ ನನಗೆ ದುಪ್ಪಟ್ಟವನ್ನು ಬಿಚ್ಚಿಹಾಕಬೇಕು ಎನಿಸಿದೆ ಹಾಗೂ ಜೀವನವನ್ನು ಎದುರಿಸಬೇಕು ಎನಿಸಿದೆ ಎಂದು ಹೇಳಿದ್ದಾಳೆ. ಇದಕ್ಕೆ ನಿರ್ದೇಶಕ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

    ನಿಜ ಜೀವನದಲ್ಲಿ ಅದೆಷ್ಟೋ ಮಹಿಳೆಯರು ಈ ವಿಷಯವಾಗಿ ಪುರುಷರಿಂದ ತೆಗಳಿಕೆ ಪಡೆದುಕೊಂಡದ್ದುಂಟು. ಈ ಒಂದು ಅಂಶವನ್ನು ಚಿತ್ರದಲ್ಲಿ ಬಳಸಿ ಮಹಿಳೆಯರಿಗೆ ಸಂದೇಶವನ್ನು ನೀಡಲಾಗಿದೆ. ಹೀಗಾಗಿಯೇ ಆ ಯುವತಿ ಚಿತ್ರ ವೀಕ್ಷಿಸಿದ ಬಳಿಕ ದುಪ್ಪಟ್ಟವನ್ನು ತೆಗೆದುಹಾಕಬೇಕು ಎನಿಸುತ್ತಿದೆ ಎಂದು ದುಪ್ಪಟ್ಟ ತೆಗೆದುಹಾಕಿದ್ದಾಳೆ.

    ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇಂತಹ ಚಿತ್ರಗಳಿಂದ ಸನಾತನ ಧರ್ಮಕ್ಕೆ ಧಕ್ಕೆಯಾಗುತ್ತಿದೆ, ಮೈತುಂಬಾ ಬಟ್ಟೆ ಧರಿಸುವುದು ಧರ್ಮದ ಪಾಲನೆ ಎಂದು ಕಿಡಿಕಾರಿದ್ದಾರೆ. ಅನೇಕರು ಇಂತಹ ಚಿತ್ರಗಳಿಂದ ಹಾಗೂ ನಿರ್ದೇಶಕರಿಂದ ಒಳ್ಳೆಯ ಹುಡುಗಿಯರೂ ಸಹ ಕೆಟ್ಟ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading