ಜೈಪುರ: ಇದೇ 22ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರತರಾಗಿರುವ ಕ್ರಿಕೆಟಿಗರನ್ನು ಹೊರತುಪಡಿಸಿ ಉಳಿದ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಹೋಮ್ ಗ್ರೌಂಡ್‌ಗೆ ತೆರಳಿ ಅಭ್ಯಾಸ ಆರಂಭಿಸಿದ್ದಾರೆ.
ಇನ್ನು ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆದಿರುವುದರಿಂದ ಕಳೆದ ಆವೃತ್ತಿಗೂ ಈ ಆವೃತ್ತಿಗೂ ತಂಡಗಳಲ್ಲಿ ಭಾರೀ ಬದಲಾವಣೆಯಾಗಿದ್ದು, ಹೊಸ ಆಟಗಾರರನ್ನು ಫ್ರಾಂಚೈಸಿಗಳು ಸ್ವಾಗತಿಸಿ ಬರಮಾಡಿಕೊಂಡಿವೆ. ಈ ವಿಡಿಯೊ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿವೆ.
ಅದೇ ರೀತಿ ರಾಹುಲ್ ದ್ರಾವಿಡ್ ಸಹ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ. ಆದರೆ ದ್ರಾವಿಡ್ ವಿಡಿಯೊದಲ್ಲಿ ವಾಕರ್ ಸಹಾಯ ತೆಗೆದುಕೊಂಡು ಕುಂಟುತ್ತಾ ನಡೆಯುತ್ತಿದ್ದು, ಅಭಿಮಾನಿಗಳು ದ್ರಾವಿಡ್‌ಗೆ ಏನಾಯಿತು ಎಂಬ ಆತಂಕಕ್ಕೊಳಗಾಗಿದ್ದಾರೆ.
ಈ ಕುರಿತು ರಾಜಸ್ಥಾನ್ ರಾಯಲ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಬೆಂಗಳೂರಿನಲ್ಲಿನ ಕ್ರಿಕೆಟ್ ಆಡುವ ಸಂದರ್ಭದಲ್ಲಿ ದ್ರಾವಿಡ್ ಗಾಯಕ್ಕೊಳಗಾಗಿದ್ದು, ಸದ್ಯ ಜೈಪುರದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.
ಕಾಲು ನೋವಿದ್ದರೂ ಸಹ ಜೈಪುರಕ್ಕೆ ಪ್ರಯಾಣ ಮಾಡಿರುವ ದ್ರಾವಿಡ್ ಟೂರ್ನಿಗಾಗಿ ತಂಡ ನಡೆಸಿರುವ ಸಿದ್ಧತೆಯನ್ನು ಪರಿಶೀಲಿಸಿದ್ದು, ತಂಡದ ಆಟಗಾರರ ಜೊತೆ ಮಾತನಾಡಿ ಹುರಿದುಂಬಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


