Monday, August 31, 2026
spot_img
More
    spot_img
    HomeLatest newsTech Tips: ನಂಬರ್ ಸೇವ್ ಮಾಡದೆ WhatsApp ನಲ್ಲಿ ಮೆಸೇಜ್ ಕಳುಹಿಸುವ ಸರಳ ಟ್ರಿಕ್!

    Tech Tips: ನಂಬರ್ ಸೇವ್ ಮಾಡದೆ WhatsApp ನಲ್ಲಿ ಮೆಸೇಜ್ ಕಳುಹಿಸುವ ಸರಳ ಟ್ರಿಕ್!

    ಈಗ ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ (Smart Phone) ಇದ್ದೇ ಇರುತ್ತದೆ. ಅದೇ ರೀತಿ, ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಸಾಮಾಜಿಕ ಜಾಲತಾಣ ಮೆಟಾ ಒಡೆತನದ ವಾಟ್ಸ್‌ಆ್ಯಪ್‌ (WhatsApp) ಅನ್ನು ಬಳಸುತ್ತಾರೆ.ಮೆಸೇಜಿಂಗ್ ಆ್ಯಪ್​ಗಳಲ್ಲಿ ವಾಟ್ಸಾಪ್ ನಂಬರ್ ಒನ್ ಆಗಿದೆ.ವಾಟ್ಸ್‌ಆ್ಯಪ್‌ ಇಡೀ ಪ್ರಪಂಚದಲ್ಲಿ ಬಹಳ ಜನಪ್ರಿಯವಾದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ, ನಮ್ಮಲ್ಲಿ ಹಲವರು ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಇದನ್ನು ಸಂವಹನದ ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ.ನೀವು ಅಪರಿಚಿತ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ (WhatsApp) ಸಂದೇಶ ಕಳುಹಿಸಬೇಕಾದರೆ, ಆ ನಂಬರ್ ಅನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಕೇವಲ ಒಂದು ಮೆಸೇಜ್ ಕಳುಹಿಸುವುದಕ್ಕಾಗಿ ನಂಬರ್ ಅನ್ನು ಸೇವ್ ಮಾಡುವುದು ಅವಶ್ಯಕವಿಲ್ಲ. ಈ ಸುಲಭ ಟ್ರಿಕ್ ಬಳಸಿ, ಫೋನ್‌ನಲ್ಲಿ ನಂಬರ್ ಅನ್ನು ಸೇವ್ ಮಾಡದೆನೇ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವುದು ಸಾಧ್ಯ!ಆದಾಗ್ಯೂ, ಫೋನ್‌ನಲ್ಲಿ ಸಂಖ್ಯೆಗಳನ್ನು ಸೇವ್‌ ಮಾಡದೆ ಸಂದೇಶಗಳು, ಫೋಟೋಗಳು ಅಥವಾ ವಿಡಿಯೋಗಳನ್ನು ಕಳುಹಿಸಬೇಕಾದ ಸಂದರ್ಭಗಳು ಹಲವು.

    Advertisement

    ಫೋನ್ ನಂಬರ್‌ ಅನ್ನು ಸೇವ್‌ ಮಾಡಿಕೊಳ್ಳದೆಯೇ WhatsApp ಸಂದೇಶಗಳನ್ನು ಕಳುಹಿಸುವ ವಿಧಾನ ಇಲ್ಲಿದೆ ನೋಡಿ.

    ನಿಮ್ಮ ಫೋನ್ ಬ್ರೌಸರ್‌ನಲ್ಲಿ ‘http://wa.me/xxxxxxxxxx’ ಅಥವಾ ‘http://api.whatsapp.com/send?phone=xxxxxxxxxx’ ಲಿಂಕ್ ಅನ್ನು ತೆರೆಯಿರಿ.

    ‘xxxxxxxxxx’ ಅನ್ನು ನೀವು ಸಂದೇಶವನ್ನು ಕಳುಹಿಸಲು ಬಯಸುವ ಫೋನ್ ನಂಬರ್‌ನೊಂದಿಗೆ, ಅದರ ದೇಶದ ಕೋಡ್ ಸೇರಿಸಿ.

    ಈ ನಂಬರ್ ಯಾವ ನಂಬರ್ ಅನ್ನು ಸೇವ್ ಮಾಡದೆ, ವಾಟ್ಸಾಪ್ ಸಂದೇಶ (Whatsapp message) ಕಳುಹಿಸಬೇಕೋ ಆ ವ್ಯಕ್ತಿಯದ್ದಾಗಿರಬೇಕು.

    ನೀವು ನಂಬರ್ ಹಾಕಿದಾಗ, ಕೆಳ ಒಂದು ಮೆಸೇಜ್ ಕಾಣಿಸುತ್ತದೆ. ಅಂದರೆ Message +911234567890 on WhatsApp ಎಂದು ಕಾಣಿಸುತ್ತದೆ. ಇದರ ಕೆಳಗೆ ಶೇರ್ ಮಾಡಬೇಕಾದರೆ ಟ್ಯಾಪ್ ಮಾಡಿ ಎಂದು ಬರೆದಿರುವುದು ಕಾಣಿಸುತ್ತದೆ. ಓಪನ್ ವಾಟ್ಸಾಪ್ ಡೆಸ್ಕ್ ಟಾಪ್‌ನಲ್ಲಿ ಟ್ಯಾಪ್ ಮಾಡಬೇಕಾದ ಪಾಪ್-ಅಪ್ ಕೂಡ ಕಾಣಿಸಿಕೊಳ್ಳುತ್ತದೆ.

    ಈಗ Looks like you don’t have WhatsApp installed! DOWNLOAD or use WhatsApp Web ಎಂಬ ಮೆಸೇಜ್ ಬರುತ್ತದೆ. ಹಾಗಾಗಿ, ಮೊದಲು ವಾಟ್ಸಾಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ WhatsApp ವೆಬ್‌ನಿಂದ ಆಕ್ಸಸ್ ಮಾಡಿಕೊಳ್ಳಬೇಕು.

    ಇಷ್ಟಾದ ನಂತರ ಸೇವ್ ಮಾಡದಿರುವ ನಂಬರ್ ಗೆ ಮೆಸೇಜ್ ಕಳುಹಿಸುವುದು ಸಾಧ್ಯವಾಗುತ್ತದೆ.

    ಡಿವೈಸ್ ಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸಲಿದೆ ವಾಟ್ಸಾಪ್ :

    ಕಂಪನಿಯು ಪ್ರಸ್ತುತ WhatsApp Multi-Device ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಫೀಚರ್ ನ (Whatsapp features) ಲಾಭವನ್ನು ಬಳಕೆದಾರರು ಪಡೆಯಬಹುದು ಎನ್ನಲಾಗಿದೆ. ಈ ವೈಶಿಷ್ಟ್ಯ ಬಳಕೆದಾರರ ಬಳಕೆಗೆ ಸಿಕ್ಕಿದರೆ , ಏಕಕಾಲದಲ್ಲಿ 5 ಡಿವೈಸ್ ಒಂದೇ ಸಂಖ್ಯೆಯಿಂದ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading