ನವದೆಹಲಿ ;ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12 ನೇ ತರಗತಿಯ ಫಲಿತಾಂಶಗಳನ್ನು ತನ್ನ ಅಧಿಕೃತ ವೆಬ್‌ಸೈಟ್ – cbse.gov.in ನಲ್ಲಿ ಪ್ರಕಟಿಸಿದೆ.ಈ ಬಾರಿ 88.39% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುಮಾರು 17.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಈ ವರ್ಷ CBSE 12ನೇ ತರಗತಿ ಪರೀಕ್ಷೆ ಬರೆಯಲು ಒಟ್ಟು 16,92,794 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 14,96,307 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಈ ಬಾರಿಯ ಬೋರ್ಡ್ ಪರೀಕ್ಷೆಗಳಿಗೆ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾದರು. ಕಳೆದ ವರ್ಷದಿಗಿಂತ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ. CBSE ಮಂಡಳಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ ವರ್ಷ ಶೇ. 0.41 ರಷ್ಟು ಉತ್ತೀರ್ಣತೆಯಲ್ಲಿ ಹೆಚ್ಚಳವಾಗಿದ್ದು, ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಈ ಕೆಳಗಿನ ಅಧಿಕೃತ ಜಾಲತಾಣಗಳಲ್ಲಿ ಪರಿಶೀಲಿಸಬಹುದು:
cbseresults.nic.in
cbse.gov.in
results.cbse.nic.in
DigiLocker: results.digilocker.gov.in
SMS ಮೂಲಕ ಫಲಿತಾಂಶ ಪಡೆಯಲು : CBSE12 7738299899 ಸಂಖೆಗೆ ಕಳುಹಿಸಿ ಪಡೆಯಬಹುದಾಗಿದೆ. ರಿಜಲ್ಟ್ ರಿ-ಇವ್ಯಾಲ್ಯೂಷನ್: ಜೂನ್ 1ರಿಂದ ಅರ್ಜಿ ಸಲ್ಲಿಸಬಹುದು.
ಫಲಿತಾಂಶದಲ್ಲಿ ಯಾವ ರಾಜ್ಯ ಟಾಪ್ :
ವಿಜಯವಾಡ: 99.60 %
ತಿರುವನಂತಪುರ: 99.32 %
ಚೆನ್ನೈ: 97.39 %
ಬೆಂಗಳೂರು: 95.95 %
ದೆಹಲಿ ಪಶ್ಚಿಮ: 95.37 %
ದೆಹಲಿ ಪೂರ್ವ: 95.06 %
ಚಂಡೀಗಢ 91.61 %
ಪಂಚಕುಲ: 91.17 %
ಪುಣೆ: 90.93 %
ಅಜ್ಮೀರ್: 90.40 %
ಭುವನೇಶ್ವರ: 83.64 %
ಗುವಾಹಟಿ: 83.62 %
ಡೆಹ್ರಾಡೂನ್: 83.45 %
ಪಾಟ್ನಾ: 82.86 %
ಭೋಪಾಲ್: 82.46 %
ನೋಯ್ಡಾ 81.29 %
ಪ್ರಯಾಗರಾಜ್ 79.53 %
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


