ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ! ಕೆಲವರು ಈ ಸಿಹಿಯಾದ ಹಣ್ಣನ್ನು ತಮ್ಮ ತೋಟದಲ್ಲೇ ಬೆಳೆಸುತ್ತಾರೆ, ಇನ್ನು ಕೆಲವರು ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ಆನಂದಿಸುತ್ತಾರೆ. ಹಲಸಿನ ಹಣ್ಣಿನಿಂದ ವಿವಿಧ ರೀತಿಯ ರುಚಿಕರ ತಿನಿಸುಗಳನ್ನು ತಯಾರಿಸಬಹುದು. ಬೇಸಿಗೆಯ ದಾಹ ನೀಗಿಸಲು ಹಾಗೂ ಹೊಟ್ಟೆ ತಂಪಾಗಿಸಲು ಸಹಾಯಕವಾಗುವ ಹಲಸಿನ ಹಣ್ಣಿನ ಐಸ್‌ಕ್ರೀಮ್ ಕೂಡ ಒಂದಾಗಿದೆ. ಇಂದು ನಾವು ನಿಮಗೆ ಈ ಐಸ್‌ಕ್ರೀಮ್ ಅನ್ನು ಮನೆಯಲ್ಲಿ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸುತ್ತಿದ್ದೇವೆ.

ಬೇಕಾಗುವ ಸಾಮಗ್ರಿಗಳು:
ಹಣ್ಣಾದ ಹಲಸಿನ ತೊಳೆಗಳು – 1 ಕಪ್
ಸಕ್ಕರೆ – ಅರ್ಧ ಕಪ್
ಕೆನೆ/ಫ್ರೆಶ್ ಕ್ರೀಮ್ – 1 ಕಪ್
ಕಂಡೆನ್ಸ್ಡ್ ಮಿಲ್ಕ್ – ಅರ್ಧ ಕಪ್
ಹಾಲು – ಕಾಲು ಕಪ್
ಏಲಕ್ಕಿ ಪುಡಿ – 1/4 ಚಮಚ

ಹಲಸಿನ ಹಣ್ಣಿನ ಐಸ್‌ಕ್ರೀಮ್ ತಯಾರಿಸುವ ವಿಧಾನ:
ಮೊದಲು, ಹಲಸಿನ ತೊಳೆಗಳನ್ನು ಮತ್ತು ಸಕ್ಕರೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗುವವರೆಗೆ ರುಬ್ಬಿಕೊಳ್ಳಿ.
ಅಗತ್ಯವಿದ್ದರೆ ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ಪೇಸ್ಟ್ ಸ್ಮೂತ್ ಆಗುವಂತೆ ಮಾಡಿ.
ನಂತರ, ಒಂದು ಬಟ್ಟಲಿನಲ್ಲಿ ಫ್ರೆಶ್ ಕ್ರೀಮ್ (ಕೆನೆ) ಹಾಕಿ ಗಟ್ಟಿಯಾಗುವವರೆಗೆ ಚೆನ್ನಾಗಿ ಕಡೆಯಿರಿ.
ಈ ಕೆನೆಗೆ ಈಗ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ರುಚಿ ಪರೀಕ್ಷಿಸಿ ಸಕ್ಕರೆ ಕಡಿಮೆ ಎನಿಸಿದರೆ ಸ್ವಲ್ಪ ಹೆಚ್ಚಿಸಿ, ಪುನಃ ಮಿಕ್ಸ್ ಮಾಡಿ.
ತಯಾರಾದ ಮಿಶ್ರಣವನ್ನು ಗಾಳಿಯಾಡದ ಡಬ್ಬಿನಲ್ಲಿ ಹಾಕಿ ಫ್ರೀಜರ್‌ಲ್ಲಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ, ಅಥವಾ ರಾತ್ರಿಯಿಡೀ ಇಟ್ಟು ಗಟ್ಟಿಯಾಗಲು ಬಿಡಿ.
ಐಸ್‌ಕ್ರೀಮ್ ಸರ್ವ್ ಮಾಡುವಾಗ ಮೇಲೆ ಸ್ವಲ್ಪ ಹಲಸಿನ ಹಣ್ಣು ಕತ್ತರಿಸಿ ಅಲಂಕರಿಸಬಹುದು. ಇದು ಟೇಸ್ಟ್‌ನ ಜೊತೆಗೆ ಪ್ರೆಸೆಂಟೇಷನ್‌ಗೂ ಚೆನ್ನಾಗಿ ಇರುತ್ತದೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


