Monday, November 2, 2026
spot_img
More
    spot_img
    HomeSportsCricketಗೌತಮ್‌ ಗಂಭೀರ್‌ ತಾಯಿಗೆ ಹೃದಯಾಘಾತ; ಇಂಗ್ಲೆಂಡ್ ಪ್ರವಾಸ ಕೈಬಿಟ್ಟು ವಾಪಸ್ಸಾದ ಗಂಭೀರ್

    ಗೌತಮ್‌ ಗಂಭೀರ್‌ ತಾಯಿಗೆ ಹೃದಯಾಘಾತ; ಇಂಗ್ಲೆಂಡ್ ಪ್ರವಾಸ ಕೈಬಿಟ್ಟು ವಾಪಸ್ಸಾದ ಗಂಭೀರ್

    ಇದೇ ತಿಂಗಳ 20ರಿಂದ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಈ ಬಾರಿ ಟೀಮ್‌ ಇಂಡಿಯಾವನ್ನು ನಾಯಕನಾಗಿ ಶುಭ್‌ಮನ್ ಗಿಲ್‌ ಮುನ್ನಡೆಸುತ್ತಿರುವುದು ವಿಶೇಷ ಹಾಗೂ ಹೊಸತಾಗಿದ್ದು, ತಂಡ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಇನ್ನು ಗೌತಮ್‌ ಗಂಭೀರ್‌ ತಂಡವನ್ನು ಕೋಚ್‌ ಆಗಿ ಮುನ್ನಡೆಸುತ್ತಿದ್ದು, ಸರಣಿ ಶುರುವಾಗುವ ಮುನ್ನವೇ ಇಂಗ್ಲೆಂಡ್‌ನಿಂದ ತವರಿಗೆ ಮರಳಿದ್ದಾರೆ. ಹೌದು, ಗಂಭೀರ್‌ ಅವರ ತಾಯಿಗೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಈ ನಿಟ್ಟಿನಲ್ಲಿ ಭಾರತಕ್ಕೆ ಗಂಭೀರ್‌ ವಾಪಸ್ಸಾಗಿದ್ದಾರೆ. ಇನ್ನು ಭಾರತ ತಂಡದ ಆಟಗಾರರು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಮುನ್ನವೇ ಇಂಗ್ಲೆಂಡ್‌ ತಲುಪಿದ್ದ ಗಂಭೀರ್‌ ಈಗಾಗಲೆ ಇಂಗ್ಲೆಂಡ್‌ ಕೌಂಟಿ ತಂಡಗಳ ಜೊತೆ ಟೆಸ್ಟ್‌ ಆಡುತ್ತಿರುವ ಭಾರತ ಬಿ ತಂಡದ ಆಟವನ್ನು ಗಮನಿಸುತ್ತಿದ್ದರು.

    ಇನ್ನು ಜೂನ್‌ 20ರಿಂದ 24ರವರೆಗೆ ಮೊದಲ ಟೆಸ್ಟ್‌ ಪಂದ್ಯ ನಡೆದರೆ, ಎರಡನೇ ಪಂದ್ಯ ಜುಲೈ 2ರಿಂದ 6ರವರೆಗೆ ನಡೆಯಲಿದೆ, ಮೂರನೇ ಪಂದ್ಯ ಜುಲೈ 10ರಿಂದ 14ರವರೆಗೆ ನಡೆಯಲಿದೆ, ನಾಲ್ಕನೇ ಪಂದ್ಯ ಜುಲೈ 23ರಿಂದ 23ರವರೆಗೆ ನಡೆಯಲಿದೆ ಹಾಗೂ ಅಂತಿಮ ಪಂದ್ಯ ಜುಲೈ 31ರಿಂದ ಆಗಸ್ಟ್‌ 4ರವರೆಗೆ ನಡೆಯಲಿದೆ.

    ಈ ಸರಣಿಗೆ ಪ್ರಕಟವಾಗಿರುವ ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search