ಬೆಂಗಳೂರು: ನಾಳೆ ( ಆಗಸ್ಟ್ 14 ) ಭಾರತದ ಎರಡು ಬಹು ನಿರೀಕ್ಷಿತ ಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲಿವೆ. ಬಾಲಿವುಡ್‌ನ ವಾರ್ 2 ಹಾಗೂ ತಮಿಳಿನ ಕೂಲಿ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ.
ವಾರ್ 2 ಚಿತ್ರ ಜೂನಿಯರ್ ಎನ್‌ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ಚಿತ್ರ ಮತ್ತು ವಾರ್ ಚಿತ್ರದ ಸೀಕ್ವೆಲ್ ಎಂಬ ಕಾರಣಕ್ಕೆ ಸದ್ದು ಮಾಡಿದ್ದರೆ, ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರ ಹಾಗೂ ಬೃಹತ್ ತಾರಾಗಣದ ಕಾರಣದಿಂದಾಗಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಈಗಾಗಲೇ ಎರಡೂ ಚಿತ್ರಗಳ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತವೆ ಎಂಬುದು ಘೋಷಣೆಯಾದ ದಿನದಿಂದಲೂ ವಾರ್ 2 ಚಿತ್ರವನ್ನು ಎಲ್ಲ ಹಂತದಲ್ಲೂ ಹಿಂದಿಕ್ಕುತ್ತಾ ಬಂದಿರುವ ಕೂಲಿ ಅಡ್ವಾನ್ಸ್ ಬುಕಿಂಗ್‌ನಲ್ಲೂ ಸಹ ಹಿಂದಿಕ್ಕಿದೆ.
ಅದರಲ್ಲೂ ಬೆಂಗಳೂರು ಹಾಗೂ ಹೈದರಾಬಾದ್ ಮುಂಗಡ ಬುಕಿಂಗ್‌ನಲ್ಲಿ ಕೂಲಿ ವಾರ್ 2 ಚಿತ್ರವನ್ನು ದೊಡ್ಡ ಮಟ್ಟದಲ್ಲೇ ಹಿಂದಿಕ್ಕಿದೆ. ತೆಲುಗು ನಟ ಎನ್‌ಟಿಆರ್ ನಟಿಸಿರುವ ಚಿತ್ರವನ್ನು ಹೈದರಾಬಾದ್‌ನಲ್ಲಿ ಕೂಲಿ ಹಿಂದಿಕ್ಕಿರುವುದು ವಿಶೇಷ ಹಾಗೂ ಆಶ್ಚರ್ಯಕರವಾಗಿದೆ.
ಅಂದಹಾಗೆ ಬೆಂಗಳೂರಿನಲ್ಲಿ ಕೂಲಿ ಚಿತ್ರ ಅಡ್ವಾನ್ಸ್ ಬುಕಿಂಗ್‌ನಲ್ಲಿ 9 ಕೋಟಿ ಗಳಿಕೆ ಮಾಡಿದ್ದರೆ, ವಾರ್ 2 ಚಿತ್ರ 1.54 ಕೋಟಿ ರೂ ಗಳಿಕೆ ಮಾಡಿದೆ. ಅತ್ತ ಹೈದರಾಬಾದ್‌ನಲ್ಲಿ ಕೂಲಿ 3.4 ಕೋಟಿ ರೂ ಮುಂಗಡವಾಗಿ ಗಳಿಕೆ ಮಾಡಿದ್ದರೆ, ವಾರ್ 2 ಚಿತ್ರ 2.5 ಕೋಟಿ ರೂ ಗಳಿಕೆ ಮಾಡಿದೆ.
ಅಂಬಾನಿ ರಿಫೈನರಿ ಮೇಲೆ ದಾಳಿ ಬೆದರಿಕೆ ಹಾಕಿದ ಪಾಕ್ ಮನೀರ್ ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


