Monday, August 31, 2026
spot_img
More
    spot_img
    HomeLatest newsದಿನಕ್ಕೆ ಎಷ್ಟು ಚಪಾತಿ ತಿಂದರೆ ತೂಕ ಇಳಿಸಬಹುದು? ಇಲ್ಲಿದೆ ಡಯೆಟ್ ಟಿಪ್ಸ್

    ದಿನಕ್ಕೆ ಎಷ್ಟು ಚಪಾತಿ ತಿಂದರೆ ತೂಕ ಇಳಿಸಬಹುದು? ಇಲ್ಲಿದೆ ಡಯೆಟ್ ಟಿಪ್ಸ್

    ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅಧಿಕ ತೂಕದ ಸಮಸ್ಯೆ ಸಾಮಾನ್ಯವಾಗಿದೆ. ತೂಕ ಇಳಿಸಿಕೊಳ್ಳಲು ಅನೇಕರು ಜಿಮ್‌ಗೆ ಹೋಗುವುದು, ವ್ಯಾಯಾಮ ಮಾಡುವುದರ ಜೊತೆಗೆ ಆಹಾರ ಕ್ರಮದಲ್ಲಿ ಚಪಾತಿಯನ್ನು ಸೇರಿಸಿಕೊಳ್ಳುತ್ತಾರೆ.

    Advertisement

    ತೂಕ ಇಳಿಸಿಕೊಳ್ಳಲು ಬಯಸುವವರು ಸಾಮಾನ್ಯವಾಗಿ ಪ್ರತಿದಿನ ಗೋಧಿ ಅಥವಾ ಬಹುಧಾನ್ಯದ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ಸೇವಿಸುತ್ತಾರೆ. ಆದರೆ, ಪ್ರತಿದಿನ ಎಷ್ಟು ಚಪಾತಿ ತಿನ್ನುವುದು ಉತ್ತಮ ಎಂಬ ಪ್ರಶ್ನೆ ಅನೇಕರಲ್ಲಿದೆ.

    ತೂಕ ಕಡಿಮೆ ಮಾಡುವ ಉದ್ದೇಶದಿಂದ ಬಹುಪಾಲು ಜನರು ಅನ್ನ ಅಥವಾ ಇತರ ಕಾರ್ಬೋಹೈಡ್ರೇಟ್‌ ಆಹಾರಗಳ ಬದಲಿಗೆ ಚಪಾತಿ ಸೇವಿಸುವತ್ತ ತಿರುಗುತ್ತಿದ್ದಾರೆ.

    ಕೆಲವರು ಗೋಧಿ ಹಿಟ್ಟಿನಿಂದ ತಯಾರಾದ ಚಪಾತಿ ಸೇವಿಸುತ್ತರೆ, ಇನ್ನು ಕೆಲವರು ಬಹುಧಾನ್ಯಗಳ ಮಿಶ್ರಣದಿಂದ ತಯಾರಿಸಿದ ಚಪಾತಿಯನ್ನು ಆಯ್ಕೆ ಮಾಡುತ್ತಾರೆ.ಈ ರೀತಿ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಪ್ರತಿದಿನ ಎಷ್ಟು ಚಪಾತಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.

    ಫೈಬರ್‌ ಸಮೃದ್ಧ

    ಚಪಾತಿ ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸಲ್ಪಡುತ್ತದೆ ಮತ್ತು ಇದು ಫೈಬರ್‌ನಲ್ಲಿ ತುಂಬಾ ಸಮೃದ್ಧವಾಗಿದೆ. ಈ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಮಲಬದ್ಧತೆಯಿಂದ ಪೀಡಿತರಾದವರಿಗೆ ಬಹುಪಾಲು ಪರಿಹಾರ ನೀಡುತ್ತದೆ.

    ಫೈಬರ್ ಕರುಳಿನ ಆರೋಗ್ಯ ಕಾಪಾಡುವುದಲ್ಲದೆ, ಹೊಟ್ಟೆ ತುಂಬಿರೋ ಅನುಭವವನ್ನು ಉಂಟುಮಾಡಿ, ಪದೇಪದೇ ತಿನ್ನುವ ಚಟವನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

    ಅಗತ್ಯ ಪೋಷಕಾಂಶಗಳ ಆಗರ:

    ಚಪಾತಿಯಲ್ಲಿ ವಿಟಮಿನ್ B1, B2, B3, B6, B9 ಮತ್ತು E ಜೊತೆಗೆ ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಸಿಲಿಕಾನ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಅಯೋಡಿನ್, ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿವೆ.

    ಇದರಲ್ಲಿರುವ ಕಬ್ಬಿಣಾಂಶ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.ಮೆಗ್ನೀಸಿಯಮ್ ಮತ್ತು ರಂಜಕ ಮೂಳೆಗಳನ್ನು ಬಲಪಡಿಸುತ್ತದೆ.


    ಇದು ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಲು ಕೂಡ ಸಹಕಾರಿ.ಆದ್ದರಿಂದ, ಚಪಾತಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.

    ದೇಹಕ್ಕೆ ಶಕ್ತಿ ಒದಗಿಸುವಲ್ಲಿ

    ಚಪಾತಿಯಲ್ಲಿ ಇರುವ ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ಸಮರ್ಪಕ ಶಕ್ತಿಯನ್ನು ಒದಗಿಸುತ್ತವೆ. ಈ ಶಕ್ತಿ ನಿಮಗೆ ದಿನವಿಡೀ ಚೈತನ್ಯ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

    ತೂಕ ನಿಯಂತ್ರಣಕ್ಕೆ ಸಹಾಯಕ

    ಒಂದು ಚಪಾತಿಯಲ್ಲಿ ಸುತ್ತಮುತ್ತ 70 ರಿಂದ 100 ಕ್ಯಾಲೊರಿಗಳು ಇರುತ್ತವೆ. ಇದರಲ್ಲಿರುವ ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಟ್ಟೆಯನ್ನು ತುಂಬಿದಂತಹ ಅನುಭವವನ್ನು ಉಂಟುಮಾಡಿ ಅನಗತ್ಯ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡುತ್ತದೆ.

    ಇದರಿಂದ ತೂಕ ಇಳಿಸಲು ಮತ್ತು ನಿಯಂತ್ರಿಸಲು ಸಹಾಯವಾಗುತ್ತದೆ. ತಜ್ಞರು ಪ್ರತಿ ಆಹಾರದಲ್ಲಿ 2ರಿಂದ 3 ಚಪಾತಿಗಳ ಜೊತೆಗೆ ವಿವಿಧ ತರಕಾರಿಗಳನ್ನು ಕೂಡ ಸೇರಿಸುವಂತೆ ಸಲಹೆ ನೀಡುತ್ತಾರೆ, ಇದು ಸಮತೋಲನ ಆಹಾರ ಕ್ರಮಕ್ಕಾಗಿ ಮಹತ್ವವಾಗಿದೆ.

    ಮಲ್ಟಿಗ್ರೇನ್ ಬಳಸಿ:

    ಕೇವಲ ಗೋಧಿ ಹಿಟ್ಟಿನ ಬದಲು, ಅದಕ್ಕೆ ಸೋಯಾಬೀನ್ ಹಿಟ್ಟು ಅಥವಾ ಸಿರಿಧಾನ್ಯಗಳ ಹಿಟ್ಟನ್ನು ಸೇರಿಸಿ ಚಪಾತಿ ತಯಾರಿಸಬಹುದು.

    ಮಾರುಕಟ್ಟೆಯಲ್ಲಿ ಲಭ್ಯವಿರುವ ಮಲ್ಟಿಗ್ರೇನ್ ಅಥವಾ ಸಿರಿಧಾನ್ಯಗಳ ಹಿಟ್ಟನ್ನು ಸಹ ಬಳಸಬಹುದು. ಆದರೆ, ಆರೋಗ್ಯ ತಜ್ಞರ ಪ್ರಕಾರ, ಗೋಧಿ ಹಿಟ್ಟಿನೊಂದಿಗೆ ಮೈದಾ ಸೇರಿಸದೇ ಇರುವುದು ಉತ್ತಮ.

    ಚಪಾತಿ ತಯಾರಿಸುವಾಗ ಹೆಚ್ಚು ಎಣ್ಣೆ ಅಥವಾ ತುಪ್ಪ ಬಳಸುವುದು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ, ಏಕೆಂದರೆ ಇದು ದೇಹದಲ್ಲಿ ಅನಗತ್ಯ ಕೊಬ್ಬು ಹೆಚ್ಚಾಗಲು ಕಾರಣವಾಗಬಹುದು.

    ಆದ್ದರಿಂದ, ಸಾಧ್ಯವಾದಷ್ಟು ಕಡಿಮೆ ಪ್ರಮಾಣದ ಎಣ್ಣೆ ಅಥವಾ ತುಪ್ಪ ಬಳಸಬೇಕು. ಈ ಎರಡನ್ನೂ ಬಳಸದೆ ಚಪಾತಿ ತಯಾರಿಸುವುದು ಇನ್ನೂ ಉತ್ತಮ.

    ಧರ್ಮಸ್ಥಳ ಪ್ರಕರಣ: ‘ಮಾಸ್ಕ್ ಮ್ಯಾನ್’ ಮಂಪರು ಪರೀಕ್ಷೆಗೆ ಎಸ್‌ಐಟಿ ಸಿದ್ಧತೆ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading