Monday, August 31, 2026
spot_img
More
    spot_img
    HomeStateDistrictಧರ್ಮಸ್ಥಳ ಪ್ರಕರಣ: 'ಮಾಸ್ಕ್ ಮ್ಯಾನ್' ಮಂಪರು ಪರೀಕ್ಷೆಗೆ ಎಸ್‌ಐಟಿ ಸಿದ್ಧತೆ

    ಧರ್ಮಸ್ಥಳ ಪ್ರಕರಣ: ‘ಮಾಸ್ಕ್ ಮ್ಯಾನ್’ ಮಂಪರು ಪರೀಕ್ಷೆಗೆ ಎಸ್‌ಐಟಿ ಸಿದ್ಧತೆ

    ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪಕ್ಕೆ ಸಂಬಂಧಿಸಿದ ತನಿಖೆ ಮಹತ್ವದ ಹಂತ ತಲುಪಿದೆ. ಪ್ರಕರಣದ ದೂರುದಾರ, ‘ಮಾಸ್ಕ್ ಮ್ಯಾನ್’ ಎಂದು ಕರೆಯಲ್ಪಡುವ ವ್ಯಕ್ತಿ ಸೂಚಿಸಿದ 17 ಸ್ಥಳಗಳಲ್ಲಿ ಎಸ್‌ಐಟಿ (SIT) ತಂಡ ಭಾರೀ ಮಟ್ಟದ ಶೋಧ ಕಾರ್ಯಾಚರಣೆ ನಡೆಸಿದರೂ, ಒಂದೇ ಸ್ಥಳದಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ದೊರೆತಿವೆ.

    Advertisement

    ಉಳಿದ ಎಲ್ಲ ಸ್ಥಳಗಳಲ್ಲಿ ಯಾವುದೇ ಪುರಾವೆ ಸಿಗದ ಕಾರಣ, ಎಸ್‌ಐಟಿ ತಂಡ ದೂರುದಾರರ ಹೇಳಿಕೆಗೆ ಸಂಶಯ ವ್ಯಕ್ತಪಡಿಸಿದ್ದು, ದೂರುದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.ಕೋರ್ಟ್ ನಿಂದ ಅನುಮತಿ ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ‘ಮಾಸ್ಕ್ ಮ್ಯಾನ್’ ತನಿಖಾಧಿಕಾರಿಗಳಿಗೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಒಟ್ಟು 300 ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿದ್ದು, ಈಗಾಗಲೇ ಶೋಧ ನಡೆದ ಸ್ಥಳಗಳ ಜೊತೆಗೆ ಇತರ ಎಲ್ಲ ಜಾಗಗಳನ್ನೂ ಜಿಪಿಆರ್ (GPR) ತಂತ್ರಜ್ಞಾನ ಬಳಸಿ ಪುನಃ ಪರಿಶೀಲಿಸಲು ಮನವಿ ಮಾಡಿದ್ದಾರೆ.

    ನಿರ್ದಿಷ್ಟವಾಗಿ ಸೂಚಿಸಿದ 6ನೇ ಸ್ಥಳದಲ್ಲಿ ಮಾತ್ರ ಮೂಳೆ ಅವಶೇಷಗಳು ಪತ್ತೆಯಾಗಿದ್ದು, ಉಳಿದ 16 ಸ್ಥಳಗಳು ಖಾಲಿ. ಈ ಹಿನ್ನೆಲೆಯಲ್ಲಿ, ಹೆಚ್ಚಿನ ಸ್ಪಷ್ಟತೆಗಾಗಿ ನ್ಯಾಯಾಲಯದ ಅನುಮತಿಯಿಂದ ಮಂಪರು ಪರೀಕ್ಷೆ ನಡೆಸುವ ಯೋಜನೆ ಎಸ್‌ಐಟಿಯದು.

    SIT ತಂಡವು ಇದುವರೆಗೆ 13 ಸ್ಥಳಗಳಲ್ಲಿ ಅಸ್ಥಿಪಂಜರಗಳಿಗಾಗಿ ಉತ್ಖನನ ನಡೆಸಿದ್ದು, 6ನೇ ಸ್ಥಳದಲ್ಲಿ ಮಾತ್ರ ಅವು ಪತ್ತೆಯಾಗಿವೆ. ಇತ್ತೀಚೆಗೆ, 13ನೇ ಸ್ಥಳದಲ್ಲಿ ಜಿಪಿಆರ್ ಯಂತ್ರವನ್ನು ಬಳಸಿ ಸ್ಕ್ಯಾನ್ ಮಾಡಿದ ನಂತರ, 18 ಆಡಿ ಆಳ, 8 ಅಡಿ ಅಗಲ, 22 ಅಡಿ ಉದ್ದಕ್ಕೆ ಭೂಮಿ ಅಗೆಯಲಾಗಿತ್ತು.

    18 ಅಡಿ ಆಳದವರೆಗೆ ಉತ್ಖನನ, ಜಿಪಿಆರ್ ಸ್ಕ್ಯಾನಿಂಗ್, ಹಾಗೂ ಎರಡು ಜೆಸಿಬಿಗಳ ಸಹಾಯದ ಬಳಿಕವೂ ಯಾವುದೇ ಪುರಾವೆ ದೊರೆಯದೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳು ಆ ಸ್ಥಳದಲ್ಲಿ ಶೋಧ ಕಾರ್ಯವನ್ನು ನಿಲ್ಲಿಸಿದ್ದಾರೆ. ಇತರ ಸ್ಥಳಗಳಲ್ಲಿಯೂ ಇದೇ ರೀತಿಯ ಫಲಿತಾಂಶಗಳು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣ: ತನಿಖೆ ಅಂತಿಮ ಹಂತದಲ್ಲಿ, ದಿನವೂ ಲಕ್ಷಾಂತರ ವೆಚ್ಚ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading