ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ. ಅನಾಮಿಕ ದೂರುದಾರರು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿದ್ದರಿಂದ, ಎಸ್‌ಐಟಿ ತಂಡವು ಗುರುತಿಸಲಾದ ಸ್ಥಳಗಳನ್ನು ಅಗೆದು ಶೋಧ ನಡೆಸುತ್ತಿದೆ. ಕಳೆದ 13 ದಿನಗಳಿಂದ ಗ್ರಾಮದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯ ದೈನಂದಿನ ವೆಚ್ಚಗಳು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುತ್ತಿವೆ.
ಎಸ್‌ಐಟಿ ತನಿಖೆಗೆ ಪ್ರತಿದಿನ ಸುಮಾರು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದ್ದು, ಅದರಲ್ಲಿ ಪ್ರಮುಖ ವೆಚ್ಚಗಳು ಈ ಕೆಳಗಿನಂತಿವೆ:
ಸಿಬ್ಬಂದಿ ಊಟ ಮತ್ತು ವಸತಿ: ಅಧಿಕಾರಿಗಳ ಊಟ-ತಿಂಡಿ ಮತ್ತು ವಸತಿಗಾಗಿ ದಿನಕ್ಕೆ 10,000 ರೂ.
ದಿನಗೂಲಿ ಕಾರ್ಮಿಕರು: ಗುಂಡಿ ಅಗೆಯಲು 15 ಜನರಿಗೆ ಪ್ರತಿದಿನ ಒಬ್ಬರಿಗೆ 2,000 ರೂ. ಗಳಂತೆ ಒಟ್ಟು 30,000 ರೂ.
ವಾಹನ ಮತ್ತು ಇಂಧನ: ಪೊಲೀಸರು ಮತ್ತು ವೈದ್ಯರ ಓಡಾಟಕ್ಕೆ ವಾಹನ ಹಾಗೂ ಪೆಟ್ರೋಲ್ ಖರ್ಚು 20,000 ರೂ.
ತಂತ್ರಜ್ಞಾನ ಮತ್ತು ಉಪಕರಣಗಳು:ಜಿಪಿಆರ್ (GPR) ಯಂತ್ರಕ್ಕೆ ದಿನಕ್ಕೆ 2 ಲಕ್ಷ ರೂ. ಬಾಡಿಗೆ.
ಫೋರೆನ್ಸಿಕ್ ವೈದ್ಯರ ತಂಡದ ವಿಶೇಷ ಉಪಕರಣಗಳ ಬಳಕೆಗಾಗಿ ದಿನಕ್ಕೆ 3,000 ರಿಂದ 4,000 ರೂ.
5 ಹೊಸ ಕಂಪ್ಯೂಟರ್‌ಗಳು, 20 ಕುರ್ಚಿಗಳು, 3 ಪ್ರಿಂಟರ್‌ಗಳು ಸೇರಿದಂತೆ ಇತರೆ ಸಾಮಗ್ರಿಗಳಿಗಾಗಿ ಒಟ್ಟು 40,000 ರೂ.
ಇತರೆ ವೆಚ್ಚಗಳು:
ಎಸ್‌ಐಟಿ ತಂಡದ ಸದಸ್ಯರ ಮೂರು ಹೊತ್ತಿನ ಊಟ-ತಿಂಡಿಗೆ 10,000 ರೂ.
ತಾತ್ಕಾಲಿಕ ಟೆಂಟ್‌ಗಳ ವೆಚ್ಚ ದಿನಕ್ಕೆ 3,000 ದಿಂದ 4,000 ರೂ.
ಕಾರ್ಯಾಚರಣೆಯಲ್ಲಿರುವ ತಂಡದ ವಿವರ
ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಒಟ್ಟು 260 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ:
ಎಸ್‌ಐಟಿ ತಂಡ: 26 ಜನ
ಎಫ್‌ಎಸ್‌ಎಲ್ (FSL) ತಜ್ಞರು: 5 ಜನ
ಎಸ್‌ಓಸಿಓ (SOCO) ತಜ್ಞರು: 5 ಜನ
ಪೌರಕಾರ್ಮಿಕರು: 15 ಜನ
ಪೊಲೀಸ್ ಸಿಬ್ಬಂದಿ: 200 ಜನ
ಒಬ್ಬ ಸಹಾಯಕ ಆಯುಕ್ತರು (AC) ಮತ್ತು ಒಬ್ಬ ತಹಶೀಲ್ದಾರ್.
ಸ್ಥಳೀಯಾಡಳಿತದ 5 ಜನ ಅಧಿಕಾರಿಗಳು.
ಇಲ್ಲಿಯವರೆಗೆ ನೇತ್ರಾವತಿ ನದಿ ತಟ, ಬಂಗ್ಲಗುಡ್ಡ, ಕಲ್ಲೇರಿ, ರತ್ನಗಿರಿ ಬೆಟ್ಟ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಆದರೆ, ದೂರುದಾರರು ಹೇಳಿದ 6ನೇ ಸ್ಥಳವನ್ನು ಹೊರತುಪಡಿಸಿ ಬೇರೆಡೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ತನಿಖೆ ಮುಂದುವರಿಯುತ್ತಿದ್ದು, ಲಕ್ಷಾಂತರ ವೆಚ್ಚವಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


