ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಇತ್ತೀಚೆಗೆ ತಮ್ಮ ತಮ್ಮ ಕುಟುಂಬದ ಜೊತೆ ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಇದೀಗ ಭಾರತಕ್ಕೆ ಮರಳಿರುವ ಅವರು ಜಿಮ್ ಸೇರಿದಂತೆ ಕ್ರಿಕೆಟ್ ಅಭ್ಯಾಸವನ್ನು ಆರಂಭಿಸಿದ್ದಾರೆ.
ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರೊಂದಿನ ಫೋಟೋವನ್ನು ಹಿಟ್‌ಮ್ಯಾನ್ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.
2025ರ ಮೇ ತಿಂಗಳಿನಲ್ಲಿ ಭಾಗವಹಿಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ, “ತಮ್ಮ ಮನಸಿನಲ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಆಡುವ ಗುರಿಯಿದೆ. ಇದು ನನ್ನ ಮನಸಿನಲ್ಲಿದೆ,” ಎಂದು ಹೇಳಿದ್ದಾರೆ. ಈಗ ರೋಹಿತ್ ಶರ್ಮಾ ಅವರ ಈ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಗೂ ತಮ್ಮ ಇತ್ತೀಚಿನ ಹೇಳಿಕೆಯ ಮೂಲಕ ತಾವು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಆಡುವುದನ್ನು ಖಚಿತಪಡಿಸಿದ್ದಾರೆ.
,ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜುವುದರಿಂದ ಆಗುವ ಪ್ರಯೋಜನಗಳೇನು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


