ಮೈಸೂರು: ಹಿಂದೂ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ ಎಂಬ ವಿಪಕ್ಷಗಳ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಈಶ್ವರ, ರಾಮ ಇಬ್ಬರು ಇದ್ದಾರೆ. ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ ಮಾಡ್ತಿದ್ದಾರೆ. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಾನು ಯಾರ ಮೇಲೂ ಎಫ್‌ಐಆರ್ ಹಾಕಿ ಎಂದು ಹೇಳಿಲ್ಲ. ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.
ಇನ್ನು ಜಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ಜಾತಿಗಣತಿ ಮಾಡ್ತಿದ್ದಾರೆ. ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಮತಾಂತರ ಆದ್ರೆ ಅದನ್ನು ಸೇರಿಸಿ ಹಾಕ್ತಾರೆ ಈಗ ನಾನು ಹಿಂದೂ ಮುಸ್ಲಿಂಗೆ ಕನ್ವರ್ಟ್ ಆಗಿದ್ದೀನಿ ಅಂತ ಇಟ್ಟುಕೊಳ್ಳೋಣ ಧರ್ಮ ಬದಲಾವಣೆ ಆದ್ರೆ ಹಂಗೆ ಬರುತ್ತದೆ. ಅದರಲ್ಲಿ ಹೊಸ ಜಾತಿ ಅಂತ ಬರಲ್ಲ. ನಾನು ಎಲ್ಲೇ ಇರಲಿ ಮುಸ್ಲಿಂ ಕ್ರಿಶ್ಚಿಯನ್ ಯಾವ ಧರ್ಮದಲ್ಲಿ ಇದ್ರೂ ಅದೇ ಬರುತ್ತೆ. ಮತಾಂತರಗೊಳ್ಳೋದು ಅವರ ಇಷ್ಟ ಸಂವಿಧಾನದಲ್ಲಿ ಅದಕ್ಕೆ ಅವಕಾಶ ಇದೆ. ಬಿಜೆಪಿ ಅವ್ರು ಕೆಲವರು ಕನ್ವರ್ಷನ್ ಆಗಿದ್ದಾರೆ ಎಂದು ಹೇಳಿದರು.
ಇನ್ನು ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತನಿಖೆ ಅನಗತ್ಯ ವಿಳಂಬ ಆಗ್ತಿದೆ ಅಂತ ನನಗೇನೂ ಅನಿಸುತ್ತಿಲ್ಲ ಸರ್ಕಾರ ತನಿಖೆಯಲ್ಲಿ ತಲೆ ಹಾಕಲ್ಲ. ತನಿಖೆ ವಿಳಂಬ ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ದಸರಾ ಒಂದು ಧರ್ಮಕ್ಕೆ ಸೇರಿದ ಹಬ್ಬವಲ್ಲ; ಬಾನು ಮುಷ್ತಾಕ್ ವಿರೋಧಿಸಿದ ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ಟಾಂಗ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


