Monday, July 6, 2026
spot_img
More
    spot_img
    HomeLatest newsBREAKING: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ; ಇವರ ಮೇಲೆಯೇ ಅನುಮಾನ ಎಂದು ದೂರು!

    BREAKING: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ; ಇವರ ಮೇಲೆಯೇ ಅನುಮಾನ ಎಂದು ದೂರು!

    ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನವಾಗಿದ್ದು, 3 ಲಕ್ಷ ನಗದು ಕಳುವಾಗಿರುವ ಘಟನೆ ನಡೆದಿದೆ.

    Advertisement

    ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿರುವ ವಿಜಯಲಕ್ಷ್ಮಿ ಫ್ಲಾಟ್‌ನಲ್ಲಿ 3 ಲಕ್ಷ ರೂ ಕಳುವಾಗಿದ್ದು, ಮ್ಯಾನೇಜರ್‌ ನಾಗರಾಜ್‌ ದೂರು ದಾಖಲಿಸಿದ್ದಾರೆ.

    ಇನ್ನು ನಾಗರಾಜ್‌ ಮನೆ ಕೆಲಸದವರ ಮೇಲೆ ಅನುಮಾನ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆ ಕೆಲಸದವರು ಮ್ಯಾನೇಜರ್‌ ಬಳಿ ಹಣ ಕೇಳಿದ್ದರಂತೆ. ಈ ವೇಳೆ ಕೊಡಬೇಕಿದ್ದ ಹಣವನ್ನು ನೀಡಿ ಉಳಿದ ಹಣವನ್ನು ಕಬೋರ್ಡ್‌ನಲ್ಲಿಯೇ ಇಟ್ಟಿದ್ದರಂತೆ ಮ್ಯಾನೇಜರ್‌ ನಾಗರಾಜ್.‌ ಬಳಿಕ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ವಿಜಯಲಕ್ಷ್ಮಿ ಅವರ ತಾಯಿಯ ಬಳಿ ಕೊಟ್ಟು ತೆರಳಿದ್ದಂತೆ.

    ವಿಜಯಲಕ್ಷ್ಮಿ ಸೆಪ್ಟೆಂಬರ್‌ 7ರಂದು ಮೈಸೂರಿನಿಂದ ವಾಪಸ್‌ ಆಗಿದ್ದು, ಮಾರನೇ ದಿನ ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

    ದಸರಾಗೂ ಖಾಸಗಿ ದರ್ಬಾರಿಗೂ ಯಾವುದೇ ಸಂಬಂಧವಿಲ್ಲ ಅದು ಮನೆತನಕ್ಕೆ ಸೇರಿದ ಪೂಜೆ: ಯದುವೀರ್‌

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading