ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಾಂತಾರ ಎ ಲೆಜೆಂಡ್ ಚಾಪ್ಟರ್ 1 ಚಿತ್ರ ಬಿಡುಗಡೆಗೊಂಡು ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.
2022ರಲ್ಲಿ ತೆರೆಗೆ ಬಂದಿದ್ದ ಕಾಂತಾರ ಎ ಲೆಜೆಂಡ್ ಚಿತ್ರದ ಪ್ರೀಕ್ವೆಲ್ ಆಗಿದ್ದ ಕಾರಣಕ್ಕೆ ಬೃಹತ್ ನಿರೀಕ್ಷೆ ಹುಟ್ಟುಹಾಕಿದ್ದ ಕಾಂತಾರ ಚಾಪ್ಟರ್ 1 ಬಿಡುಗಡೆಯ ನಂತರ ತನ್ನ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೊದಲ ದಿನವೇ ವಿಶ್ವದಾದ್ಯಂತ 89 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಪುಗಾಲು ಇಟ್ಟಿದ್ದ ಕಾಂತಾರ ಸಸ್ಯ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 11 ದಿನಕ್ಕೆ 600 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದ್ದು, ಭಾರತ ಮಾರುಕಟ್ಟೆಯಲ್ಲಿಯೇ 500 ಕೋಟಿ ಗಳಿಕೆಯನ್ನು ಮಾಡಿ ಮುಗಿಸಿದೆ.
ಈ ಮೂಲಕ ಭಾರತದ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಕೆ ಮಾಡಿದ 16ನೇ ಚಿತ್ರ ಎಂಬ ಸಾಧನೆಯನ್ನು ಕಾಂತಾರ ಎ ಲೆಜೆಂಡ್ ಚಾಪ್ಟರ್ 1 ಮಾಡಿದ್ದು, ಇಲ್ಲಿಯವರೆಗೆ ಭಾರತದಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಎಲ್ಲ ಚಿತ್ರಗಳ ಪಟ್ಟಿ ಮುಂದಿದೆ.
- ಬಾಹುಬಲಿ (2015)
- ದಂಗಲ್ (2016)
- ಬಾಹುಬಲಿ 2 (2017)
- 2.0 (2018)
- ಆರ್‌ಆರ್‌ಆರ್ (2022)
- ಕೆಜಿಎಫ್ 2 (2022)
- ಪಠಾಣ್ (2023)
- ಗದರ್ 2 (2023)
- ಜವಾನ್ (2023)
- ಅನಿಮಲ್ (2023)
- ಸಲಾರ್ (2023)
- ಕಲ್ಕಿ 2898 ಎಡಿ (2024)
- ಸ್ತ್ರೀ 2 (2024)
- ಪುಷ್ಪ 2 (2024)
- ಛಾವ (2025)
- ಕಾಂತಾರ ಚಾಪ್ಟರ್ 1 (2025)
( ಈ ಪಟ್ಟಿಯಲ್ಲಿ ಭಾರತ ಬಾಕ್ಸ್‌ಆಫೀಸ್‌ನಲ್ಲಿ 500 ಕೋಟಿ ಗಳಿಕೆ ಮಾಡಿದ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಸಿದ ಭಾರತದ ಚಿತ್ರಗಳನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ )
ಕಲಿಯುಗದ ಕುಡುಕ ರಾಜು ತಾಳಿಕೋಟೆಗೆ ಏನಾಗಿತ್ತು? ಸಾಯುವ ಮುನ್ನ ಪಕ್ಕದಲ್ಲಿಯೇ ಇದ್ದ ನಟ ಶೈನ್ ಶೆಟ್ಟಿ ಹೇಳಿದ್ದಿಷ್ಟು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


