ಕನ್ನಡ ಚಿತ್ರರಂಗದ ಹಾಸ್ಯ ಚತುರ, ಕಲಿಯುಗದ ಕುಡುಕ ಎಂದೇ ಖ್ಯಾತಿಯನ್ನು ಗಳಿಸಿದ್ದ ರಾಜು ತಾಳಿಕೋಟೆ ಹೃದಯಾಘಾತದಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. 60 ವರ್ಷ ವಯಸ್ಸಾಗಿದ್ದ ಇವರು ಬೆಂಗಳೂರಿನಿಂದ ಉಡುಪಿಗೆ ಕನ್ನಡ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದರು.
ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ರಾಜು ತಾಳಿಕೋಟೆಗೆ ಏನಾಯಿತು ಎಂಬುದನ್ನು ಅವರ ಜತೆಯಲ್ಲಿಯೇ ಇದ್ದ ಶೈನ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ಊಟ ಮುಗಿಸಿ ಇನ್ನೇನು ನಿದ್ರೆಗೆ ಜಾರುವ ಸನಿಹದಲ್ಲಿದ್ದ ರಾಜು ತಾಳಿಕೋಟೆ ಅವರಿಗೆ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು, ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದೆವು ಎಂದು ಶೈನ್ ಶೆಟ್ಟಿ ತಿಳಿಸಿದ್ದಾರೆ.
ಈ ಹಿಂದಿನಿಂದಲೂ ಉಸಿರಾಟದ ಸಮಸ್ಯೆ ಹೊಂದಿದ್ದ ರಾಜು ತಾಳಿಕೋಟೆ ಅವರು ಚೆನ್ನಾಗಿಯೇ ತಮ್ಮೊಂದಿಗೆ ಮಾತನಾಡಿಕೊಂಡಿದ್ದರು, ಆ ಸಮಯಕ್ಕೆ ಬೇರೆ ಯಾವುದೇ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿರಲಿಲ್ಲ, ಆಸ್ಪತ್ರೆಗೆ ಬಂದ ಕೂಡಲೇ ಸಿಪಿಆರ್ ಮಾಡಿ ದಾಖಲು ಮಾಡಿಕೊಳ್ಳಲಾಯಿತು ಸಂಜೆ 5.45ಕ್ಕೆ ಅವರು ನಿಧನ ಹೊಂದಿದರು ಎಂದು ಶೈನ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇನ್ನು ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವುದಿಲ್ಲ, ನೇರವಾಗಿ ಅವರ ಹುಟ್ಟೂರಿಗೆ ಕೊಂಡೊಯ್ಯುವುದಾಗಿ ಸಹ ಶೈನ್ ಶೆಟ್ಟಿ ತಿಳಿಸಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂದು ನಾನು ಹೇಳೇ ಇಲ್ಲ: ಪ್ರಿಯಾಂಕ್ ಖರ್ಗೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


