ಸಿಂಗಪೂರ್: ಚೀನಾದ ಚಾಂಪಿಯನ್‌ನ್ನು ಮಣಿಸಿ ಚೆಸ್ ಚಾಂಪಿಯನ್ ಶಿಪ್‌ನ್ನು ಮುಡಿಗೇರಿಸಿಕೊಂಡ ಗುಕೇಶ್ ಗೆಲುವನ್ನು ಪ್ರಶ್ನಿಸಲಾಗುತ್ತಿದೆ.
18 ವರ್ಷದ ಗುಕೇಶ್ ಇತಿಹಾಸ ನಿರ್ಮಿಸುತ್ತಿದ್ದಂತೆಯೇ ಈ ಬಗ್ಗೆ ರಷ್ಯಾ ಕ್ಯಾತೆ ತೆಗೆದಿದೆ. ಗುಕೇಶ್ ಗೆಲುವು ಅನುಮಾನಾಸ್ಪದವಾಗಿದೆ. ಚೀನಾದ ಹಾಲಿ ಚಾಂಪಿಯನ್ ಲಿರೆನ್ ಉದ್ದೇಶಪೂರ್ವಕವಾಗಿ ಪಂದ್ಯ ಸೋತಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಷ್ಯಾದ ಚೆಸ್ ಫೆಡರೇಶನ್ ಮುಖ್ಯಸ್ಥ ಆಂಡ್ರೆ ಫಿಲಾಟೊವ್ ಪಟ್ಟು ಹಿಡಿದಿದ್ದಾಎ ಎಂಬ ಮಾಹಿತಿ ಲಭ್ಯವಾಗಿದೆ.
ಫಲಿತಾಂಶದ ಬಗ್ಗೆ ತನಿಖೆ ನಡೆಸಲು ಫಿಲಾಟೊವ್ ಇಂಟರ್‌ನ್ಯಾಷನಲ್ ಚೆಸ್ ಫೆಡರೇಶನ್‌ನ್ನು ಆಂಡ್ರೇ ಫಿಲಾಟೊವ್ ಕೇಳಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.
ಕೊನೆಯ ಪಂದ್ಯದ ಫಲಿತಾಂಶ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಬ್ರಮೆಯನ್ನು ಉಂಟು ಮಾಡಿದೆ.
ನಿರ್ಣಾಯಕ ವಿಭಾಗದಲ್ಲಿ ಚೀನಾದ ಚೆಸ್ ಆಟಗಾರನ ಕ್ರಮಗಳು ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಾರಣದಿಂದ FIDE ನಿಂದ ಪ್ರತ್ಯೇಕ ತನಿಖೆಯ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
ಡಿಂಗ್ ಲಿರೆನ್ ಇದ್ದ ಸ್ಥಾನವನ್ನು ಕಳೆದುಕೊಳ್ಳುವುದು ಪ್ರಥಮ ದರ್ಜೆ ಆಟಗಾರನಿಗೂ ಕಷ್ಟಕರವಾಗಿದೆ. ಪಂದ್ಯದಲ್ಲಿ ಚೀನಾದ ಚೆಸ್ ಆಟಗಾರನ ಸೋಲು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಉದ್ದೇಶಪೂರ್ವಕವಾಗಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


