Wednesday, August 5, 2026
spot_img
More
    spot_img
    HomeLatest newsಚಿನ್ನ-ಬೆಳ್ಳಿ ಪ್ರಿಯರಿಗೆ ಡಬಲ್ ಧಮಾಕ! ಬಂಗಾರದಲ್ಲಿ ₹2,700, ಬೆಳ್ಳಿಯಲ್ಲಿ ಭರ್ಜರಿ ₹6,000 ಇಳಿಕೆ!

    ಚಿನ್ನ-ಬೆಳ್ಳಿ ಪ್ರಿಯರಿಗೆ ಡಬಲ್ ಧಮಾಕ! ಬಂಗಾರದಲ್ಲಿ ₹2,700, ಬೆಳ್ಳಿಯಲ್ಲಿ ಭರ್ಜರಿ ₹6,000 ಇಳಿಕೆ!

    ಕಳೆದ ಕೆಲವು ದಿನಗಳಿಂದ ರಾಕೆಟ್ ವೇಗದಲ್ಲಿ ಸಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗೆ ಕೊನೆಗೂ ಬ್ರೇಕ್ ಬಿದ್ದಿದೆ! ನಿರಂತರ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸ್ವಲ್ಪ ಇಳಿದಿದ್ದರೆ, ಬೆಳ್ಳಿ ಬೆಲೆ ಒಂದೇ ದಿನದಲ್ಲಿ ದೊಡ್ಡ ಕುಸಿತ ಕಂಡಿದೆ.ಬೆಳ್ಳಿ ಇತ್ತೀಚೆಗೆ ಮೊದಲ ಬಾರಿಗೆ ಪ್ರತಿ ಕೆಜಿಗೆ 2 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿ ಇತಿಹಾಸ ಸೃಷ್ಟಿಸಿತ್ತು. ಆದರೆ, ಈಗ ಅದರ ಬೆಲೆ ತೀವ್ರವಾಗಿ ಕುಸಿದಿದೆ.ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆಯೂ ₹270 ಅಗ್ಗವಾಗಿದೆ! ಚಿನ್ನಾಭರಣ ಪ್ರಿಯರಿಗೆ ಇದು ಗುಡ್ ನ್ಯೂಸ್!

    Advertisement

    ಡಿಸೆಂಬರ್ 12ರ ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹2,01,615 ತಲುಪಿದ್ದ ಬೆಳ್ಳಿಯು, ಶನಿವಾರ (ಡಿಸೆಂಬರ್ 13) ರಂದು ಸುಮಾರು ₹8,831 ರಷ್ಟು ಇಳಿದು, ₹1,92,784 ಕ್ಕೆ ತಲುಪಿದೆ.ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡಾ 3.10 ರಷ್ಟು ಕುಸಿತವಾಗಿದೆ!ಈ ಹಠಾತ್ ಇಳಿಕೆ ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಸಿದ್ದು, ಚಿನ್ನ-ಬೆಳ್ಳಿ ಬೆಲೆಯ ಏರಿಳಿತ ಇನ್ನೂ ಕೆಲಕಾಲ ಮುಂದುವರಿಯುವ ಸಾಧ್ಯತೆ ಇದೆ. ಹೂಡಿಕೆ ಮಾಡುವಾಗ ತಾಳ್ಮೆ ಇರಲಿ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

    24 ಕ್ಯಾರೆಟ್ ಚಿನ್ನದ ಬೆಲೆ

    ಅಳತೆ ಇಂದಿನ ಬೆಲೆ ನಿನ್ನೆಯ ಬೆಲೆ ಇಳಿಕೆ

    1 ಗ್ರಾಂ ₹13,391 ₹13,418 ₹27

    8 ಗ್ರಾಂ ₹1,07,128 ₹1,07,344 ₹216

    10 ಗ್ರಾಂ ₹1,33,910 ₹1,34,180 ₹270

    100 ಗ್ರಾಂ₹13,39,100 ₹13,41,800 ₹2,700

    22 ಕ್ಯಾರೆಟ್ ಚಿನ್ನದ ಬೆಲೆ (ಬೆಂಗಳೂರು)

    ಅಳತೆ ಇಂದಿನ ಬೆಲೆ ನಿನ್ನೆಯ ಬೆಲೆ ಇಳಿಕೆ

    1 ಗ್ರಾಂ ₹12,275 ₹12,300 ₹25

    8 ಗ್ರಾಂ ₹98,200 ₹98,400 ₹200

    10 ಗ್ರಾಂ ₹1,22,750 ₹1,23,000 ₹250

    100 ಗ್ರಾಂ₹12,27,500 ₹12,30,000 ₹2,500

    ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇತ್ತೀಚಿನ ಬೆಲೆ (10 ಗ್ರಾಂಗೆ)

    ಬೆಂಗಳೂರು ₹1,33,910

    ನಾಗ್ಪುರ ₹1,33,910

    ಮುಂಬೈ ₹1,33,910

    ಚೆನ್ನೈ ₹1,33,910

    ಕೋಲ್ಕತ್ತಾ ₹1,33,910

    ಪಾಟ್ನಾ ₹1,33,970

    ಸೂರತ್‌ ₹1,33,970

    ಚಂಡೀಗಢ ₹1,34,070

    ಲಕ್ನೋ ₹1,34,070

    ಆಟೋದಲ್ಲಿನ ಒಂದು ಪೋಸ್ಟರ್‌ ಬೆಂಗಳೂರು ಹೆಣ್ಣುಮಕ್ಕಳಿಗೆ ಸುರಕ್ಷಿತ ನಗರ ಎಂದ ಮಹಿಳೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading