ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋ ಏರಬೇಕೆಂದರೆ ಮಹಿಳೆಯರಿಗೆ ಸ್ವಲ್ಪ ಭಯ ಆಗುವುದು ಸಹಜ. ಆದರೆ, ಇಲ್ಲೊಬ್ಬ ಆಟೋ ಚಾಲಕ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ತೆಗೆದುಕೊಂಡ ಒಂದು ಸಣ್ಣ ಹೆಜ್ಜೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ರಾಪಿಡೋ ಆಟೋದಲ್ಲಿ ಮಧ್ಯರಾತ್ರಿ ಮನೆಗೆ ಹೊರಟಿದ್ದ ಯುವತಿಯೊಬ್ಬರು, ಆಟೋ ಒಳಗೆ ಬರೆದಿದ್ದ ವಿಶೇಷ ಸಂದೇಶವನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಆ ಸಾಲುಗಳು ಆಕೆಗೆ ಅಪಾರ ಧೈರ್ಯ ತುಂಬಿದ್ದು, ಇದು ನಿಜಕ್ಕೂ ಧೈರ್ಯ ತುಂಬುವ ಕ್ಷಣ ಎಂದು ಹೇಳಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ!
ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋ ಏರಿದ ಒಂದು ಯುವತಿ, ಆಟೋ ಒಳಗೆ ಬರೆದಿದ್ದ ಸಾಲುಗಳನ್ನು ನೋಡಿ ಫಿದಾ ಆಗಿದ್ದಾರೆ! ತಕ್ಷಣವೇ ಅದನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
ಏನಿತ್ತು ಆಟೋದಲ್ಲಿ? ಡ್ರೈವರ್ ಹೀಗೆ ಬರೆದಿದ್ದರು: “ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ.”ವೈರಲ್ ಆಯ್ತು! ಈ ವಿಡಿಯೋ ‘Peak Bengaluru’ ಹೆಸರಿನಲ್ಲಿ ಹಂಚಿಕೆಯಾಗಿದ್ದು, ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್ಟಿ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ! ಜನರಿಂದ ಬಂದ ಕೆಲವು ಸೂಪರ್ ಕಮೆಂಟ್‌ಗಳು ಇಲ್ಲಿವೆ:
ಒಬ್ಬ ಬಳಕೆದಾರರು: “ನಾನು ಇಪ್ಪತ್ತು ವರ್ಷದಿಂದ ಈ ಸಿಟಿಯನ್ನ ನೋಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಇದು ಸುರಕ್ಷಿತ ಸ್ಥಳ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬರು: “ಒಳ್ಳೆಯವರು ಇರ್ತಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?” ಎಂದು ಪ್ರಶ್ನಿಸಿದ್ದಾರೆ.”ಇವರೇ ನಿಜವಾದ ಬೆಂಗಳೂರು ಆಟೋ ಚಾಲಕರು! ಜವಾಬ್ದಾರಿ ಇದೆ ಅನ್ನೋದಕ್ಕೆ ಇದೆ ಉದಾಹರಣೆ,” ಎಂದು ಶ್ಲಾಘಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


