ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಆಫ್ ಯುಎಸ್‌ಎ 2026ರ ಅಧ್ಯಕ್ಷರಾಗಿ ಶ್ರೀಕಾಂತ್ ಅಕ್ಕಪಲ್ಲಿ ನೇಮಕಗೊಂಡಿದ್ದಾರೆ. ಇದು 1970 ರಲ್ಲಿ ಸ್ಥಾಪನೆಯಾದ ಮತ್ತು ಪೂರ್ವ ಕರಾವಳಿಯ ಎಂಟು ರಾಜ್ಯಗಳಲ್ಲಿ ಭಾರತೀಯ ಸಮುದಾಯವನ್ನು ಪ್ರತಿನಿಧಿಸುವ ಅತಿದೊಡ್ಡ ಪ್ರಮುಖ ತಳಮಟ್ಟದ ಲಾಭರಹಿತ ಸಂಸ್ಥೆಯಾಗಿದೆ.
ಎಫ್‌ಐಎ ತನ್ನ 2026ರ ನಾಯಕತ್ವ ತಂಡವನ್ನು ಘೋಷಣೆ ಮಾಡಿದೆ. ಆಲೋಕ್ ಕುಮಾರ್, ಜಯೇಶ್ ಪಟೇಲ್ ಮತ್ತು ಕೆನ್ನಿ ದೇಸಾಯಿ ಅವರನ್ನು ಒಳಗೊಂಡ ಸ್ವತಂತ್ರವಾಗಿ ನೇಮಕಗೊಂಡ 2026ರ ಚುನಾವಣಾ ಆಯೋಗದ ನೇತೃತ್ವದಲ್ಲಿ ಸಂಸ್ಥೆಯು ತನ್ನ ವಾರ್ಷಿಕ ಆಂತರಿಕ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಆಯೋಗದ ಶಿಫಾರಸುಗಳು ಮಂಡಳಿಯ ಸಂಪೂರ್ಣ ಅನುಮೋದನೆಯನ್ನು ಪಡೆದಿವೆ ಮತ್ತು ಹೊಸದಾಗಿ ದೃಢೀಕರಿಸಿದ 2026ರ ಕಾರ್ಯಕಾರಿ ತಂಡವು ಜನವರಿ 1, 2026 ರಂದು ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ಸದ್ಯ ಸೌರಿನ್ ಪಾರಿಖ್ ಅಧ್ಯಕ್ಷರಾಗಿದ್ದು, ಅವರ 2026ರಲ್ಲಿ ಕಾರ್ಯಕಾರಿ ತಂಡವನ್ನು ಶ್ರೀಕಾಂತ್ ಅಕ್ಕಪಲ್ಲಿ ಮುನ್ನಡೆಸಲಿದ್ದಾರೆ.
ಶ್ರೀಕಾಂತ್ ಅಕ್ಕಪಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾದ ಪ್ರೀತಿ ರೇ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೃಷ್ಟಿ ಕೌಲ್ ನರುಲಾ ಮುಂದುವರಿಯಲಿದ್ದಾರೆ. ಈ ವರ್ಷದ ಪುನರ್ ರಚನೆ ಭಾಗವಾಗಿ ಚುನಾವಣಾ ಆಯೋಗ ಮತ್ತು ಎಫ್‌ಐಎ ಮಂಡಳಿಯು ಕಾರ್ಯಕಾರಿ ತಂಡವನ್ನು ಆಯ್ಕೆ ಮಾಡಲಾಗಿದೆ ಮತ್ತು ಮಂಡಳಿಯನ್ನು ವಿಸ್ತರಿಸಲಿದೆ. ಶಾರುಖ್ ಅಕೌಂಟೆಂಟ್ಸ್ ಒಂದು ಸ್ವತಂತ್ರ ಸಿಪಿಎ (CPA) ಸಂಸ್ಥೆಯು, ಸಂಸ್ಥೆಯ ಖಜಾಂಚಿಯಾಗಿ ಸೇವೆ ಸಲ್ಲಿಸಲಿದೆ.
ಶ್ರೀಕಾಂತ್ ಅಕ್ಕಪಲ್ಲಿ ಉದ್ಯಮಿಯಾಗಿದ್ದು ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಎರಡರಲ್ಲೂ ರಿಯಲ್ ಎಸ್ಟೇಟ್ ಅಭಿವೃದ್ಧಿ, ತಂತ್ರಜ್ಞಾನ, ಮಾಧ್ಯಮದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ವ್ಯಾಪಾರ ಉದ್ಯಮಗಳು ಬಹುರಾಷ್ಟ್ರೀಯ ಸಾಫ್ಟ್‌ವೇರ್ ಅಭಿವೃದ್ಧಿ, ಟ್ರಾನ್ಸಿಟ್ ತಂತ್ರಜ್ಞಾನ ಸಲಹೆ, ಜೀವ ವಿಜ್ಞಾನಗಳು, ಐಟಿ ಮತ್ತು ಕ್ಲೌಡ್ ಕಂಪ್ಯೂಟಿಂಗ್, ಕ್ರೀಡಾ ಉತ್ಪಾದನೆ ಮತ್ತು ಪ್ರೀಮಿಯಂ ಪೀಠೋಪಕರಣ ವಿನ್ಯಾಸವನ್ನು ಒಳಗೊಂಡಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶ್ರೀಕಾಂತ್ ಅಕ್ಕಪಲ್ಲಿ, ಟ್ರಸ್ಟಿಗಳ ಮಂಡಳಿಯ ಬೆಂಬಲಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಅವರ ವಿಶ್ವಾಸವನ್ನು ಪಡೆದಿರುವುದಕ್ಕೆ ತಮಗೆ ಆಶೀರ್ವಾದ ಮತ್ತು ಸಂತೋಷ ವಾಗಿದೆ ಎಂದು ಹೇಳಿದರು.
ಎಫ್‌ಐಎ ಮೂಲಕ ಒಂದು ದೊಡ್ಡ ಕುಟುಂಬವನ್ನು ಸೇರಿಕೊಳ್ಳಲು ಸಹಾಯ ಮಾಡಿದ ಅಧ್ಯಕ್ಷರಾದ ಅಂಕುರ್ ವೈದ್ಯ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಮಂಡಳಿ, ಟ್ರಸ್ಟಿಗಳು, ಸಲಹಾ ಸದಸ್ಯರು ಮತ್ತು ಕಾರ್ಯಕಾರಿ ಸಹೋದ್ಯೋಗಿಗಳಿಗೆ ಸ್ವಾಗತಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ತಮ್ಮ ತವರು ರಾಜ್ಯದಿಂದ ಈ ಸ್ಥಾನವನ್ನು ಅಲಂಕರಿಸಿದ ಮೊದಲ ವ್ಯಕ್ತಿಯಾಗುವ ಐತಿಹಾಸಿಕ ಮಹತ್ವವನ್ನು ಗುರುತಿಸಿ ಶ್ರೀಕಾಂತ್ ಅಕ್ಕಪಲ್ಲಿ ಅವರು ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ದೃಢಪಡಿಸಿದರು. ಸಂಸ್ಥೆಯನ್ನು ಮುನ್ನಡೆಸಲು, ಆಳವಾದ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಕಾರ್ಯ ನಿರ್ವಹಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹಿರಿಯ ನಾಯಕರು ಮತ್ತು ದೀರ್ಘಕಾಲದ ಸದಸ್ಯರು ಶ್ರೀಕಾಂತ್ ಅಕ್ಕಪಲ್ಲಿ ಆಯ್ಕೆಯನ್ನು ಅನುಮೋದಿಸಿದರು, ಒಬ್ಬ ಹಿರಿಯ ಸದಸ್ಯರು ಮಾತನಾಡಿ ಶ್ರೀಕಾಂತ್ ಅಕ್ಕಪಲ್ಲಿ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸಮಗ್ರತೆ ಮತ್ತು ದೀರ್ಘಕಾಲದ ಬದ್ಧತೆಯನ್ನು ಶ್ಲಾಘಿಸಿದರು.
ಐದು ದಶಕಗಳಿಗಿಂತ ಹೆಚ್ಚು ಸಮರ್ಪಿತ ಸೇವೆಯೊಂದಿಗೆ, ಶೇ. 100 ರಷ್ಟು ಸ್ವಯಂಸೇವಕರಿಂದ ನಡೆಸಲ್ಪಡುವ ಸಂಸ್ಥೆಯಾಗಿ ಎಫ್‌ಐಎ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಷನಲ್ ರೆಕಾರ್ಡ್‌ನಲ್ಲಿ ಅಧಿಕೃತ ಮಾನ್ಯತೆಯನ್ನು ಗಳಿಸಿದೆ. ಭಾರತದ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದೆ ಮತ್ತು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


