ಬೆಂಗಳೂರು: ಕಿರುತೆರೆ ನಟಿ ಶ್ರುತಿ ವರ್ತನೆಯಿಂದ ಬೇಸತ್ತು ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾಗಿ ಆರೋಪಿ ಪತಿ ಅಮರೇಶ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಗಂಡನಾದ ನಾನು ಶ್ರುತಿಗೆ ಲೆಕ್ಕಕ್ಕೆ ಇರಲಿಲ್ಲ. ಪಬ್, ಪಾರ್ಟಿ ಎಂದು ಸದಾ ಹೊರಗೆ ಸುತ್ತಾಡುತ್ತಿದ್ದಳು. ವಾರಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಆಕೆ ತನ್ನ ಜೀವನಕ್ಕಾಗಿ ಮನೆಯ ಮೋಜಿನ ಜೀವನಕ್ಕಾಗಿ ಭೋಗ್ಯದ ಹಣದೊಂದಿಗೆ ಪರಾರಿಯಾಗಲು ಸಂಚು ಮಾಡಿದ್ದಳು.
ವರ್ತನೆಯಿಂದ ಬೇಸತ್ತು ಕೊಲೆ ಮಾಡಲು ಯತ್ನಿಸಿದೆ ಹಾಗೂ ಮನೆಯ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತಿದ್ದೆ ಎಂದು ಅಮರೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಶ್ರುತಿ ಯಾರಿಗೂ ಹೇಳದೆ ಹದಿನೈದು ದಿನ ಪ್ರಯಾಗ್ ರಾಜ್‌ಗೆ ಪ್ರವಾಸ ಹೋಗಿದ್ದಳು. ಇದೇ ವಿಚಾರಕ್ಕೆ ಹಿಂದೆ ಗಲಾಟೆ ಆಗಿತ್ತು. ಗಂಡ ಮಕ್ಕಳಿದ್ದರೂ ಮತ್ತು ಅಣ್ಣನ ಜತೆ ಇರುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದಳು. ಶೂಟಿಂಗ್ ನೆಪದಲ್ಲಿ ಮನೆಗೆ ಬಾರದೆ ಸದಾ ಪಬ್, ಪಾರ್ಟಿ ಅಂತ ಸುತ್ತಾಡುತ್ತಿದ್ದಳು. ಎಂದು ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ನಾನು ಮತ್ತು ಶ್ರುತಿ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀನಗರದ ಮುನೇಶ್ವರ ಬ್ಲಾಕ್‌ನಲ್ಲಿ 27 ಲಕ್ಷ ರೂ.ಗಳಿಗೆ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಳ್ಳಲಾಗಿತ್ತು. ಮಕ್ಕಳಿಗೆ ತಾಯಿ ಪ್ರೀತಿಯನ್ನೂ ಕೊಟ್ಟಿಲ್ಲ. ಮಕ್ಕಳು ಫೋನ್ ಮಾಡಿ ಕೇಳಿದರೆ, “ಮನೆಗೆ ಬರಲ್ಲ. ಏನ್ ಮಾಡ್ಕೊತಿಯೋ ಮಾಡ್ಕೋʼ ಎನ್ನುತ್ತಿದ್ದಳು. ಭೋಗ್ಯಕ್ಕಿದ್ದ ಮನೆಯನ್ನು ಖಾಲಿ ಮಾಡಿ ಹಣ ತೆಗೆದುಕೊಂಡು ಪರಾರಿಯಾಗುವುದು ಆಕೆಯ ಸಂಚಾಗಿತ್ತು. ಅದಕ್ಕೆ ನಾನು ಒಪ್ಪದಿದ್ದಾಗ ನನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು ಎಂದು ಅಮರೇಶ್ ಆರೋಪಿಸಿದ್ದಾನೆ.
ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್: ಎರಡನೇ ಇನ್ನಿಂಗ್ಸ್‌ನಲ್ಲಿ ಎಡವಿದ ಭಾರತ; ಸಣ್ಣ ಟಾರ್ಗೆಟ್ ಮುಟ್ಟಲು ಪರದಾಟ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


