ಲಂಡನ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ಇಂದು ( ಜುಲೈ 14 ) ಜರುಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇತ್ತ ಭಾರತ ಸಹ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇನ್ನು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತಕ್ಕೆ 193 ರನ್‌ಗಳ ಗುರಿಯನ್ನು ನೀಡಿದೆ.
ಇತ್ತ ಈ ಗುರಿಯನ್ನು ಬೆನ್ನಟ್ಟಿರುವ ಭಾರತ ನಾಲ್ಕನೇ ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಈ ಮೂಲಕ ಕೊನೆಯ ದಿನವಾದ ಇಂದು ಭಾರತಕ್ಕೆ ಗೆಲ್ಲಲು 135 ರನ್‌ಗಳು ಹಾಗೂ ಇಂಗ್ಲೆಂಡ್‌ಗೆ 6 ವಿಕೆಟ್‌ಗಳ ಅಗತ್ಯವಿದೆ.
ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಡಕ್‌ಔಟ್, ಕರುಣ್ ನಾಯರ್ 14, ಶುಭ್‌ಮನ್ ಗಿಲ್ 6, ಆಕಾಶ್ ದೀಪ್ 1 ಹಾಗೂ ಕೆಎಲ್ ರಾಹುಲ್ ಅಜೇಯ 33 ರನ್ ಗಳಿಸಿದ್ದಾರೆ.
ಗ್ಯಾಜೆಟ್ ಖರೀದಿಗೆ ಇದು ಸೂಕ್ತ ಸಮಯ! ಫ್ಲಿಪ್‌ಕಾರ್ಟ್ ಗೋಟ್ ಸೇಲ್‌ನಲ್ಲಿ ಭಾರೀ ಕೊಡುಗೆಗಳು
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


