Saturday, September 5, 2026
spot_img
More
    spot_img
    HomeStateDistrictಮಹದೇಶ್ವರಬೆಟ್ಟ: 5 ಹುಲಿಗಳ ಸಾವಿಗೆ ನಿಖರ ಕಾರಣ ಬಿಚ್ಚಿಟ್ಟ ಪ್ರಯೋಗಾಲಯದ ವರದಿ

    ಮಹದೇಶ್ವರಬೆಟ್ಟ: 5 ಹುಲಿಗಳ ಸಾವಿಗೆ ನಿಖರ ಕಾರಣ ಬಿಚ್ಚಿಟ್ಟ ಪ್ರಯೋಗಾಲಯದ ವರದಿ

    ‍ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿ ಧಾಮದ ಹೂಗ್ಯಂ ವಲಯದ ಅರಣ್ಯ ಪ್ರದೇಶ ದಲ್ಲಿ ಇತ್ತೀಚೆಗೆ ಐದು ಹುಲಿಗಳು ಸಾವಿಗೀಡಾಗಿರುವುದಕ್ಕೆ ಕೀಟನಾಶಕವನ್ನು ಸಿಂಪ ಡಣೆ ಮಾಡಿದ್ದ ಹಸುವಿನ ಕಳೇ ಬರವನ್ನು ತಿಂದದ್ದೇ ಕಾರಣ ಎಂಬುದು ಪ್ರಯೋಗಾ
    ಲಯದ ವರದಿಯಿಂದ ದೃಢಪಟ್ಟಿದೆ.

    Advertisement

    ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಗಂ ವಲಯದ ಮೀಣ್ಯಂ ಬಳಿಯ ಅರಣ್ಯದಲ್ಲಿ ಹಸುವನ್ನು ಕೊಂದಿದ್ದ ಹುಲಿ ಸಾಯಿಸಲು ಹಸುವಿನ ಮಾಲೀಕ ಮತ್ತು ಇತರರಿಬ್ಬರು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಖರೀದಿಸಿ, ಹಸುವಿನ ಕಳೇಬರದ ಮೇಲೆ ಸಿಂಪಡಿಸಿದ್ದರು.

    ಹಸುವನ್ನು ಕೊಂದಿದ್ದ ಹುಲಿ ತನ್ನ ಮರಿಹುಲಿಗಳೊಂದಿಗೆ ಬಂದು ಹಸುವಿನ ಕಳೇಬರವನ್ನು ತಿಂದಿದ್ದು ಹುಲಿಮರಿಗಳು ಕ್ಷಣಾರ್ಧದಲ್ಲಿ ಮೃತಪಟ್ಟರೆ, ತಾಯಿ ಹುಲಿ ನರಳಾಡಿ ತುಸು ಸಮಯದ ಬಳಿಕ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    ಮೀಣ್ಯಂ ಸಮೀಪದ ಕಾಡಿನೊಳಗೆ ಹಸುವಿನ ಕಳೇಬರ ತಿಂದು ಐದು ಹುಲಿಗಳು ಸಾವನ್ನಪ್ಪಿದ್ದವು. ಹುಲಿಗಳ ಸಾವಿಗೆ ಕಾರಣ ತಿಳಿಯಲು ಹುಲಿಗಳ ಅಂಗಾಗದ ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ
    ಪ್ರಯೋಗಾಲಯದಿಂದ ವರದಿ ಬಂದಿದ್ದು, ಹುಲಿಗಳ ಸಾವಿಗೆ ವಿಷಕಾರಿ ಕಾರ್ಬೋಫುರಾನ್‌ ಅನ್ನು ಹಸುವಿನ ಕಳೇಬರದ ಮೇಲೆ ಸಿಂಪಡಣೆ ಮಾಡಿದ್ದೇ ಕಾರಣ ಎಂಬುದು ದೃಢಪಟ್ಟಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ತಿಳಿಸಿದ್ದಾರೆ.

    ಗ್ಯಾಜೆಟ್ ಖರೀದಿಗೆ ಇದು ಸೂಕ್ತ ಸಮಯ! ಫ್ಲಿಪ್‌ಕಾರ್ಟ್ ಗೋಟ್ ಸೇಲ್‌ನಲ್ಲಿ ಭಾರೀ ಕೊಡುಗೆಗಳು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading