ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಮುರುಳಿ ಮೋಹನ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್ ನಿಧನರಾಗಿದ್ದಾರೆ. ಜೆಸಿ ರೋಡ್ ಬಳಿಯಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುರುಳಿ ಮೋಹನ್ ನಿಧನಕ್ಕೆ ಸ್ಯಾಂಡಲ್ ವುಡ್ ಬೇಸರ ವ್ಯಕ್ತಪಡಿಸಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಂತ ಮುರುಳಿ ಮೋಹನ್ ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕಿಡ್ನಿಯ ಕಸಿ ಮಾಡಬೇಕಾದ ಅವಶ್ಯಕತೆ ಇತ್ತು. ಆ ಕಿಡ್ನಿ ಕಸಿಗಾಗಿ ಹಣ ಕೂಡ ಬೇಕಾಗಿತ್ತು. 25 ಲಕ್ಷ ಹಣದ ಅವಶ್ಯಕತೆ ಇದ್ದ ಕಾರಣ, ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಹಣ ಇಲ್ಲದ ಕಾರಣ ಕಿಡ್ನಿ ಕೂಡ ಕಸಿಯಾಗಿರಲಿಲ್ಲ. ಈಗ ಇಹಲೋಕವನ್ನೇ ತ್ಯಜಿಸಿದ್ದಾರೆ.
ಉಪೇಂದ್ರ ಅವರ ಆಪ್ತರಾಗಿದ್ದ ಮುರುಳಿ ಮೋಹನ್ ಅವರು, ಕಾಶೀನಾಥ್ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಉಪೇಂದ್ರ ನಾಯಕನಟ ಆಗಿದ್ದ ನಾಗರಹಾವು, ರವಿಚಂದ್ರನ್ ನಾಯಕರಾದ ಮಲ್ಲಿಕಾರ್ಜುನ, ಶಿವಣ್ಣರಿಗಾಗಿ ಸಂತು ಸಿನಿಮಾವನ್ನ ಮಾಡಿದ್ದರು. ಅವರ ಸಿನಿಮಾಗಳಿಗಾಗಿ ಆಕ್ಷನ್ ಕಟ್ ಹೇಳಿದ್ದರು. ಅಷ್ಟೇ ಅಲ್ಲ ಉಪ್ಪಿಯ ಹಲವು ಸಿನಿಮಾಗಳಿಗೆ ಜೊತೆಯಾಗಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


