Tuesday, November 3, 2026
spot_img
More
    spot_img
    HomeEntertainmentಉಪೇಂದ್ರ ಬಗ್ಗೆ ಮಾತನಾಡಿದ ರಜನಿಕಾಂತ್ ಹೇಳಿದ್ದೇನು ?

    ಉಪೇಂದ್ರ ಬಗ್ಗೆ ಮಾತನಾಡಿದ ರಜನಿಕಾಂತ್ ಹೇಳಿದ್ದೇನು ?

    ರಜನಿಕಾಂತ್‌, ಅಮೀರ್‌ ಖಾನ್‌, ನಾಗಾರ್ಜುನ, ಉಪೇಂದ್ರ ಸೇರಿದಂತೆ ಬಹುಭಾಷಾ ತಾರೆಗಳಿರುವ ‘ಕೂಲಿ’ ಚಿತ್ರ ಇಂದು (ಆ.14) ತೆರೆ ಕಾಣುತ್ತಿದೆ. ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನಿಮಾ ಕೂಲಿ ಹೊಸ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಕನ್ನಡದ ನಟ ಮತ್ತು ನಟಿಯರೂ ಸಹ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಯ ನಟರು ನಟಿಸಿದ್ದಾರೆ.

    ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮ ನಡೆದಿದ್ದು, ಕನ್ನಡ ನಟ, ನಿರ್ದೇಶಕ ಉಪೇಂದ್ರ ಕುರಿತು ರಜನಿಕಾಂತ್‌ ಮಾತುಗಳನ್ನಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟ ಉಪೇಂದ್ರ ಅವರ ನಿರ್ದೇಶನ ಎ ಹಾಗೂ ಓಂ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ.

    ‘ಭಾರತದಲ್ಲಿರುವ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರುಗಳಿಗೆ ಸ್ಫೂರ್ತಿ ಉಪೇಂದ್ರ. ಕನ್ನಡ ಚಿತ್ರರಂಗದವರಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳ, ತಮಿಳು ಸಿನಿಮಾ ಮಂದಿಯೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ, ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು. ಉಪೇಂದ್ರ ನಟನೆಗಿಂತ ನಿರ್ದೇಶನ ನನಗೆ ಹೆಚ್ಚು ಇಷ್ಟ.

    ಅವರು ಶಿವರಾಜ್​ಕುಮಾರ್ ಜೊತೆ ‘ಓಂ’ ಸಿನಿಮಾ ಮಾಡಿದ್ದರು. ನಮಗೆ ಇಲ್ಲಿ ಹೇಗೆ ‘ಬಾಷಾ’ ಚಿತ್ರವೋ, ಅಲ್ಲಿ ‘ಓಂ’. ಈ ಸಿನಿಮಾ ನನ್ನ ‘ಬಾಷಾ’ ಚಿತ್ರಕ್ಕಿಂತ ಹತ್ತು ಪಟ್ಟು ಉತ್ತಮ ಸಿನಿಮಾ. ಇವರ ಓಂ ಸಿನಿಮಾ ಬಾಷಾದಂತಹ 10 ಸಿನಿಮಾಗಳಿಗೆ ಸಮ ಎಂದು ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಲೋಕೇಶ್ ಕನಗರಾಜ್ ಮಾಡುತ್ತಿರುವ ನಾನ್‌ಲೀನಿಯರ್ ಸಿನಿಮಾಗಳನ್ನು ಉಪೇಂದ್ರ ಆಗಲೇ ಮಾಡಿಬಿಟ್ಟಿದ್ದಾರೆ’ ಎಂದು ರಜನಿಕಾಂತ್‌ ಹೋಗಳಿದ್ದಾರೆ.

    ,BIG NEWS: ಆಗಸ್ಟ್‌ 15ರಿಂದ ರಾಜ್ಯದ ಈ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ನಿಷೇಧ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search