ಶಿವರಾಜ್‌ಕುಮಾರ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಹೊಸ ಚಿತ್ರವನ್ನು ಪವನ್ ಒಡೆಯನ್ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಆರ್ನಾ ಕ್ರಿಯೇಟಿವ್ಸ್ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದೆ.
ಪ್ರಮುಖ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ ಈ ಚಿತ್ರಕ್ಕೆ ಶೂಟಿಂಗ್ ಪ್ರಾರಂಭವಾಗಲಿದ್ದು, ಚಿತ್ರದ ತಾರಾಗಣ ಹಾಗೂ ತಾಂತ್ರಿಕ ತಂಡವನ್ನು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.
ಈ ಹೊಸ ಚಿತ್ರವು ಅಪೇಕ್ಷಾ ಪವನ್ ಒಡೆಯರ್ ಮತ್ತು ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಜ್ವಲ್ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಾರೆ.
,ಇ-ಸ್ವತ್ತು ಮೂಲಕ ನಮೂನೆ 11 ಬಿ ಖಾತೆ ವಿತರಿಸಲು ಕ್ರಮ: ಪ್ರಿಯಾಂಕ್ ಖರ್ಗೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


