Monday, November 2, 2026
spot_img
More
    spot_img
    HomeLatest news2026ರ ಹಜ್‌ ಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ! ಇಲ್ಲಿದ ಸಂಪೂರ್ಣ ವಿವರ

    2026ರ ಹಜ್‌ ಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ! ಇಲ್ಲಿದ ಸಂಪೂರ್ಣ ವಿವರ

    2026ನೇ ಸಾಲಿನ ಹಜ್ ಯಾತ್ರಿಕರನ್ನು ಆಯ್ಕೆ ಮಾಡಲು ಭಾರತೀಯ ಹಜ್ ಸಮಿತಿಯು ಬುಧವಾರ ಮುಂಬೈನ ಹಜ್ ಹೌಸ್‌ ನಲ್ಲಿ ಕುರ್ರಾ (ಲಾಟರಿ ಡ್ರಾ) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ. ದೇಶದಾದ್ಯಂತ 1,94,007 ಮಂದಿ ಈ ಬಾರಿ ಹಜ್‌ ಗೆ ತೆರಳಲು ಅರ್ಜಿ ಸಲ್ಲಿಸಿದ್ದರು.

    ಸಮಿತಿಯ ಅಧಿಸೂಚನೆಯಂತೆ, ಈ ಕುರ್ರಾ ಪ್ರಕ್ರಿಯೆಯನ್ನು ಬೆಳಿಗ್ಗೆ 11:30 ಗಂಟೆಗೆ ಆರಂಭಿಸಲಾಗಿದ್ದು, ಅಧಿಕೃತ ವೆಬ್‌ಸೈಟ್ hajcommittee.gov.in ನಲ್ಲಿ ನೇರ ಪ್ರಸಾರವೂ ಮಾಡಲಾಯಿತು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಾತ್ಕಾಲಿಕ ಆಯ್ಕೆಗೊಂಡ ಹಾಗೂ ವೈಟಿಂಗ್‌ ಲಿಸ್ಟ್‌ ನಲ್ಲಿನ ಹಜ್‌ ಯಾತ್ರಿಕರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

    ಅರ್ಜಿ ಸಲ್ಲಿಸಿದ್ದ ಯಾತ್ರಿಕರು ತಮ್ಮ ಕವರ್ ಸಂಖ್ಯೆ ಬಳಸಿ ಆಯ್ಕೆ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಅರ್ಜಿದಾರರಿಗೆ SMS ಮೂಲಕ ಸಹ ಮಾಹಿತಿಯನ್ನೂ ಕಳುಹಿಸಲಾಗಿದೆ.

    ತಾತ್ಕಾಲಿಕವಾಗಿ ಆಯ್ಕೆಯಾದವರು ಆಗಸ್ಟ್ 20 ರೊಳಗೆ 1,52,300 ರೂಪಾಯಿ ಮೊತ್ತದ ಮುಂಗಡ ಹಜ್ ಶುಲ್ಕವನ್ನು ಪಾವತಿಸಬೇಕಾಗಿದೆ. ಪಾವತಿ ವಿಳಂಬವಾದರೆ ಅವರ ಆಯ್ಕೆಯು ರದ್ದಾಗಲಿದೆ ಎಂದು ಸಮಿತಿಯು ಸ್ಪಷ್ಟಪಡಿಸಿದೆ.

    2026 ರ ಹಜ್ ಯಾತ್ರೆಯು ಮೇ 24 ರಿಂದ 29 ರ ನಡುವೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ದೇಶದಾದ್ಯಂತ 18 ಎಂಬಾರ್ಕೇಶನ್ ತಾಣಗಳು ಸೇವೆಗೆ ಲಭ್ಯವಿದೆ. ಇದರಲ್ಲಿ ದಿಲ್ಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮುಂತಾದ ಪ್ರಮುಖ ನಗರಗಳು ಸೇರಿವೆ. ಭೋಪಾಲ್, ವಿಜಯವಾಡ, ಔರಂಗಾಬಾದ್ ಮುಂತಾದ ಕೆಲವು ನಗರಗಳಲ್ಲಿ ಈ ಬಾರಿ ಎಂಬಾರ್ಕೇಶನ್ ಸೌಲಭ್ಯ ಲಭ್ಯವಿರುವುದಿಲ್ಲ.

    ಉದ್ಯೋಗಸ್ಥರಿಗೆ ಹಜ್ ಸಮಿತಿಯು ಈ ಬಾರಿ ಅಲ್ಪಾವಧಿಯ ಹಜ್ ಪ್ಯಾಕೇಜ್ ಒದಗಿಸಿದ್ದು, ಇದರಲ್ಲಿ 10,000 ಕ್ಕೂ ಹೆಚ್ಚು ಯಾತ್ರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಪ್ಯಾಕೇಜ್‌ನಲ್ಲಿ 20 ದಿನಗಳ ಸೌದಿ ಅರೇಬಿಯಾದ ವಾಸ್ತವ್ಯ ಸೇರಿದ್ದು, ಅರ್ಜಿಗಳ ಸಂಖ್ಯೆ ಮಿತಿಗಿಂತ ಹೆಚ್ಚು ಇದ್ದರೆ, ಆಯ್ಕೆಗೆ ಮತ್ತೊಮ್ಮೆ ಕುರ್ರಾ ನಡೆಸಲಾಗುತ್ತದೆ.

    ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸಿದವರು ತಮ್ಮ ಅರ್ಜಿ ಆಯ್ಕೆಯ ಸ್ಥಿತಿಗತಿಯನ್ನು ಅಧಿಕೃತ ವೈಬ್ ಸೈಟ್ ನಲ್ಲಿ ಪರಿಶೀಲಿಸಬಹುದು ಎಂದು ಹಜ್ ಸಮಿತಿ ತಿಳಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search