ಪಾಟ್ನಾ: ಐಪಿಎಲ್ ಮತ್ತು ಅಂಡರ್ 19 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ 14 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಮುಂಬರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಗೆ ಬಿಹಾರ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಸಕಿಬುಲ್ ಗನಿ ತಂಡದ ನಾಯಕರಾಗಿದ್ದಾರೆ. ಬುಧವಾರದಿಂದ ನಡೆಯಲಿರುವ ಪ್ಲೇಟ್ ಹಂತದ ಮೊದಲ ಪಂದ್ಯದಲ್ಲಿ ಬಿಹಾರ ತಂಡ ಅರುಣಾಚಲ ಪ್ರದೇಶ ವಿರುದ್ಧ ಆಡಲಿದೆ. ವೈಭವ್ 2023-24ರಲ್ಲಿ 12ನೇ ವಯಸ್ಸಿನಲ್ಲೇ ರಣಜಿಗೆ ಪದಾರ್ಪಣೆ ಮಾಡಿದ್ದರು. ಐಪಿಎಲ್ ನಲ್ಲಿ ಆಡಿದ ಅತಿಕಿರಿಯ (13 ವರ್ಷ) ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ಮುಂದಿನ ವರ್ಷ ನಡೆಯಲಿರುವ 19 ವಯೋಮಿತಿ ಏಕದಿನ ವಿಶ್ವಕಪ್‌ನಲ್ಲೂ ಅವರು ಭಾರತ ಪರ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಕಲಿಯುಗದ ಕುಡುಕ ರಾಜು ತಾಳಿಕೋಟೆಗೆ ಏನಾಗಿತ್ತು? ಸಾಯುವ ಮುನ್ನ ಪಕ್ಕದಲ್ಲಿಯೇ ಇದ್ದ ನಟ ಶೈನ್ ಶೆಟ್ಟಿ ಹೇಳಿದ್ದಿಷ್ಟು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


