ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಗುರುವಾರ ಬಿಡುಗಡೆಯಾದ ಡೆವಿಲ್ ರಾಜ್ಯಾದ್ಯಂತ ಒಟ್ಟು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು.
ಬೆಂಗಳೂರು ನಗರವೊಂದರಲ್ಲಿಯೇ 939 ಪ್ರದರ್ಶನಗಳನ್ನು ಕಂಡಿದ್ದ ಡೆವಿಲ್ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಿಂದ 7 ಕೋಟಿ ಗಳಿಕೆ ಮಾಡಿತ್ತು. ದರ್ಶನ್‌ಗಿರುವ ಅಭಿಮಾನಿಗಳ ಬಲಕ್ಕೆ ತಕ್ಕನಾದ ಓಪನಿಂಗ್ ಸಿಕ್ಕಿ ಚಿತ್ರ ಮೊದಲ ದಿನ ಸ್ಯಾಕ್‌ನಿಕ್ ಪ್ರಕಾರ 10 ಕೋಟಿ ನೆಟ್ ಕಲೆಕ್ಷನ್ ಮಾಡಿತ್ತು.
ಚಿತ್ರತಂಡ ಎಲ್ಲಿಯೂ ಚಿತ್ರದ ಅಧಿಕೃತ ಗಳಿಕೆಯನ್ನು ಘೋಷಣೆ ಮಾಡಿಲ್ಲ. ಆದರೆ ಜನಪ್ರಿಯ ಬಾಕ್ಸ್ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಕ್ ಚಿತ್ರ ಮೊದಲ ದಿನ 10 ಕೋಟಿ ನೆಟ್ ಗಳಿಕೆ ಮಾಡಿದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಎರಡನೇ ದಿನ 3.4 ಕೋಟಿ ಹಾಗೂ ಮೂರನೇ ದಿನ 3.75 ಕೋಟಿ ಗಳಿಕೆ ಮಾಡಿದೆ ಎಂದು ಪ್ರಕಟಿಸಿದೆ.
ಈ ವೆಬ್‌ಸೈಟ್ ಪ್ರಕಾರ ಡೆವಿಲ್ ಮೊದಲ ಮೂರು ದಿನಗಳಲ್ಲಿ 17.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಮೊದಲ ದಿನ ಎರಡಂಕಿ ಗಳಿಕೆ ಮಾಡಿದ್ದ ಡೆವಿಲ್ ಎರಡು ಹಾಗೂ ಮೂರನೇ ದಿನ ಕುಸಿತ ಕಂಡಿದೆ. ಇಂದು ( ಡಿಸೆಂಬರ್ 14 ) ಭಾನುವಾರ ರಜಾದಿನ ಇರುವ ಕಾರಣ ಗಳಿಕೆಯಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದ್ದು, 5 ಕೋಟಿ ನೆಟ್ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


