ಧರ್ಮಸಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 117 ರನ್‌ಗೆ ಆಲ್‌ಔಟ್ ಆಗಿ ಭಾರತಕ್ಕೆ 118 ರನ್‌ಗಳ ಸುಲಭ ಗುರಿಯನ್ನು ನೀಡಿದೆ.
ದಕ್ಷಿಣ ಆಫ್ರಿಕಾ ಕೇವಲ ಒಂದು ರನ್‌ಗೆ ತನ್ನ ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಏಡನ್ ಮಾರ್ಕ್ರಮ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ ತಂಡದ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಲಿಲ್ಲ. ಮಾರ್ಕ್ರಮ್, ಫೆರೆರಿಯಾ ಹಾಗೂ ಆನ್ರಿಚ್ ನಾರ್ಕಿಯಾ ಬಿಟ್ಟರೆ ಉಳಿದ ಎಲ್ಲಾ ಆಟಗಾರರೂ ಸಹ ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು.
ತಂಡದ ಪರ ಕ್ವಿಂಟನ್ ಡಿ ಕಾಕ್ 1, ರೀಝಾ ಹೆಂಡ್ರಿಕ್ಸ್ ಡಕ್‌ಔಟ್, ಏಡನ್ ಮಾರ್ಕ್ರಮ್ 61, ಡೆವಾಲ್ಡ್ ಬ್ರೆವಿಸ್ 2, ಟ್ರಿಸ್ಟನ್ ಸ್ಟಬ್ಸ್ 9, ಕಾರ್ಬಿನ್ ಬಾಷ್ 4, ಡೊನೊವೊನ್ ಫೆರೆರಿಯಾ 20, ಮಾರ್ಕೊ ಯಾನ್ಸೆನ್ 2, ಆನ್ರಿಚ್ ನಾರ್ಕಿಯಾ 12, ಆಟ್‌ನಿಲ್ ಬ್ರಾಟ್‌ಮನ್ 1 ಹಾಗೂ ಲುಂಗಿ ಎನ್‌ಗಿಡಿ ಅಜೇಯ 2 ರನ್ ಬಾರಿಸಿದರು.
ಭಾರತದ ಪರ ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಹಾಗೂ ಶಿವಮ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


