Wednesday, November 4, 2026
spot_img
More
    spot_img
    HomeEntertainmentCCL 2025: 6 ಪಂದ್ಯಗಳು ಮುಕ್ತಾಯ; ಹೇಗಿದೆ ಅಂಕಪಟ್ಟಿ? ಕರ್ನಾಟಕ ಬುಲ್ಡೋಜರ್ಸ್‌ಗೆ ಎಷ್ಟನೇ ಸ್ಥಾನ?

    CCL 2025: 6 ಪಂದ್ಯಗಳು ಮುಕ್ತಾಯ; ಹೇಗಿದೆ ಅಂಕಪಟ್ಟಿ? ಕರ್ನಾಟಕ ಬುಲ್ಡೋಜರ್ಸ್‌ಗೆ ಎಷ್ಟನೇ ಸ್ಥಾನ?

    ಬೆಂಗಳೂರು: 2025ರ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಫೆಬ್ರವರಿ 8ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಬೆಂಗಾಲ್‌ ಟೈಗರ್ಸ್‌ ಹಾಗೂ ಚೆನ್ನೈ ರೈನೋಸ್‌ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಯಿತು.

    ಅದೇ ದಿನ ನಡೆದ ತೆಲುಗು ವಾರಿಯರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇನ್ನು ಟೂರ್ನಿಯಲ್ಲಿ ನಿನ್ನೆ ( ಫೆಬ್ರವರಿ 14 ) ತನಕ ಒಟ್ಟು 6 ಪಂದ್ಯಗಳು ನಡೆದಿದ್ದು, ನಿನ್ನೆ ಚೆನ್ನೈ ರೈನೋಸ್‌ ವಿರುದ್ಧ ನಡೆದ ಪಂದ್ಯದಲ್ಲಿಯೂ ಸಹ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್‌ ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿದೆ.

    ಅತ್ತ ಹಾಲಿ ಚಾಂಪಿಯನ್ಸ್‌ ಬೆಂಗಾಲ್‌ ಟೈಗರ್ಸ್‌ ಸಹ ತನ್ನ ಎರಡೂ ಪಂದ್ಯಗಳಲ್ಲಿಯೂ ಜಯ ಗಳಿಸಿದೆ. ಆದರೆ ಕರ್ನಾಟಕ ಬುಲ್ಡೋಜರ್ಸ್‌ ತಂಡದ ನೆಟ್‌ ರನ್‌ರೇಟ್‌ ಹೆಚ್ಚಿರುವ ಕಾರಣ ಕರ್ನಾಟಕ ಬುಲ್ಡೋಜರ್ಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಂಪೂರ್ಣ ಅಂಕಪಟ್ಟಿ ಈ ಕೆಳಕಂಡಂತಿದೆ..

    1. ಕರ್ನಾಟಕ ಬುಲ್ಡೋಜರ್ಸ್‌ – 2 ಪಂದ್ಯಗಳನ್ನಾಡಿ 2 ಗೆಲುವು – 4 ಅಂಕ ( 2.063 ನೆಟ್‌ ರನ್‌ರೇಟ್‌ )
    2. ಬೆಂಗಾಲ್‌ ಟೈಗರ್ಸ್‌ – 2 ಪಂದ್ಯಗಳನ್ನಾಡಿ 2 ಗೆಲುವು – 4 ಅಂಕ ( 1.672 ನೆಟ್‌ ರನ್‌ರೇಟ್‌ )
    3. ಭೋಜ್‌ಪುರಿ ದಬಾಂಗ್ಸ್‌ – 2 ಪಂದ್ಯಗಳನ್ನಾಡಿ 1 ಗೆಲುವು, 1 ಸೋಲು – 2 ಅಂಕ ( 1.299 ನೆಟ್‌ ರನ್‌ರೇಟ್‌ )
    4. ತೆಲುಗು ವಾರಿಯರ್ಸ್‌ – 2 ಪಂದ್ಯಗಳನ್ನಾಡಿ 1 ಗೆಲುವು, 1 ಸೋಲು – 2 ಅಂಕ ( 0.651 ನೆಟ್‌ ರನ್‌ರೇಟ್‌ )
    5. ಚೆನ್ನೈ ರೈನೋಸ್‌ – 2 ಪಂದ್ಯಗಳನ್ನಾಡಿ 2 ಸೋಲು – 0 ಅಂಕ ( 0,815 ನೆಟ್‌ ರನ್‌ರೇಟ್‌ )
    6. ಮುಂಬೈ ಹೀರೋಸ್‌ – 1 ಪಂದ್ಯವನ್ನಾಡಿ 1 ಸೋಲು – 0 ಅಂಕ ( 0.453 ನೆಟ್‌ ರನ್‌ರೇಟ್‌ )
    7. ಪಂಜಾಬ್‌ ದೆ ಶೇರ್‌ – 1 ಪಂದ್ಯವನ್ನಾಡಿ 1 ಸೋಲು – 0 ಅಂಕ ( 0. 332 ನೆಟ್‌ ರನ್‌ರೇಟ್‌ )

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search